ಕಾಸರಗೋಡು: ಪರವನಡ್ಕ ಬಾಲಕಿಯರ ಮಾಡರ್ನ್ ರೆಸಿಡೆನ್ಸಿಯಲ್ ಸ್ಕೂಲ್ ಮತ್ತು ಕುಂಡಂಕುಳಿ ಸಾವಿತ್ರಿಬಾಯಿ ಫುಲೆ ಸ್ಮಾರಕ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಯ ಅಂಗವಾಗಿ ಜೆ.ಪಿ.ಎಚ್.ಎನ್ ನೇಮಕಾತಿಗೆ ಪರಿಶಿಷ್ಟ ವರ್ಗದ ಯುವತಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪರಿಶಿಷ್ಟ ವರ್ಗದ ಅಭ್ಯರ್ಥಿಗಳ ಅನುಪಸ್ಥಿತಿಯಲ್ಲಿ ಇತರ ಅಭ್ಯರ್ಥಿಗಳನ್ನು ಸಹ ಪರಿಗಣಿಸಲಾಗುವುದು. ಸಂದರ್ಶನವು ಆಗಸ್ಟ್ 19 ರಂದು ಬೆಳಗ್ಗೆ 11ಕ್ಕೆ ಕಾಸರಗೋಡಿನ ಪರವನಡುಕ್ಕದಲ್ಲಿರುವ ಸರ್ಕಾರಿ ಮಾಡರ್ನ್ ರೆಸಿಡೆನ್ಸಿಯಲ್ ಸ್ಕೂಲ್‍ನಲ್ಲಿ ನಡೆಯಲಿದೆ. ಎಎನ್‍ಎಂ ಕೋರ್ಸ್ ಮತ್ತು ಕೇರಳ ನರ್ಸಸ್ ಅಂಡ್ ಮಿಡ್‍ವೈಫ್ ಕೌನ್ಸಿಲ್‍ನಲ್ಲಿ ನೋಂದಣಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 239969)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

