ಕಾಸರಗೋಡು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಿಜೆಪಿ ಉದುಮ ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ 'ತಿರಂಗ ಯಾತ್ರೆ'ಯನ್ನು ಆಯೋಜಿಸಲಾಯಿತು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಗೋಪಾಲ್ ಸಮಾರಂಭ ಉದ್ಘಾಟಿಸಿದರು. ಕ್ಷೇತ್ರ ಸಮಿತಿ ಅಧ್ಯಕ್ಷ ಪ್ರದೀಪ್ ಎಂ. ಕೂಟ್ಟಕ್ಕನಿ ಸಮರಂಭದ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಟಿ. ಪುರುಷೋತ್ತಮನ್, ಮಾಧ್ಯಮ ಸಂಚಾಲಕ ವೈ. ಕೃಷ್ಣದಾಸ್ ಹಾಗೂ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ಕೆ. ರಾಜೇಂದ್ರನ್, ಗೀತಾಕುಮಾರನ್ ಮತ್ತು ಮಧುಸೂದನನ್ ಮಂಡಲಿಪ್ಪಾರ, ಕಾರ್ಯದರ್ಶಿಗಳಾದ ಶ್ಯಾಮಪ್ರಸಾದ್ ಕಾಶಿ, ಶೋಭಾ ಸದಾನಂದನ್, ಶ್ರೀಜಾ ವಿನೋದ್, ಮತ್ತು ಸುಜಿತ್ ದಾಸ್ ಬೇಕಲ್, ತಹಶೀಲ್ದಾರ ವಿ.ಎ. ರತೀಶ್, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪ್ರತಾಪನ್ ನಾಯರ್, ಮಹಿಳಾ ಮೋರ್ಚಾ ಮಂಡಲಂ ಅಧ್ಯಕ್ಷೆ ಆಶಾ, ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಶೈನಿಮೋಳ್ ಸಸಿಕುಮಾರ್, ಗಂಗಾಧರನ್ ತಚ್ಚಂಗಾಡ್, ಮತ್ತು ವಿನಯನ್ ಕೋಟಿಕ್ಕುಳಂ ಉಪಸ್ಥಿತರಿದ್ದರು.
ಉದುಮದಿಂದ ಆರಂಭಗೊಂಡ 'ತಿರಂಗ ಯಾತ್ರೆ' ಪಾಲಕ್ಕುನ್ನುನಲ್ಲಿ ಮುಕ್ತಾಯವಾಯಿತು. ಸಮಾರೋಪ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಬಾಬುರಾಜ್ ಮಾತನಾಡಿದರು.
ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಸೌಮ್ಯ ಪದ್ಮನಾಭನ್ ಸ್ವಾಗತಿಸಿದರು. ವಿನಿಲ್ ಕುಮಾರ್ ಮುಲ್ಲಚ್ಚೇರಿ ವಂದಿಸಿದರು.


