HEALTH TIPS

ಚಲಿಸುತ್ತಿರುವ ಟ್ರಕ್‌ ಮೇಲೇರಿ ಚಾಲಕನಿಂದ ನೃತ್ಯ, ಹಿಡಿಶಾಪ ಹಾಕಿದ ಜನರು!

ಅಲ್ವಾರ್: ಚಲಿಸುತ್ತಿರುವ ಟ್ರಕ್‌ ಮೇಲೇರಿ ಚಾಲಕನೊಬ್ಬ ನೃತ್ಯ ಮಾಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ. 


ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಿದ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ.

ಅಲ್ವಾರ್‌ನ ಲೋಹಿಯಾ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಲಾರಿ ಚಲಿಸುತ್ತಿದ್ದಂತೆಯೇ, ಸ್ಟೀರಿಂಗ್ ಬಿಟ್ಟು ಚಾಲಕನು ಬಾಗಿಲಿನ ಮೂಲಕ ಹೊರಬಂದು ನೇರವಾಗಿ ವಾಹನದ ಚಾವಣಿ ಏರಿದ್ದಾನೆ. ಯಾವುದೇ ಭಯವಿಲ್ಲದೆ ವಾಹನದ ಮೇಲೆ ನಿಂತು ಕುಣಿಯಲು ಆರಂಭಿಸಿದ್ದಾನೆ.

ರಸ್ತೆಯಲ್ಲಿದ್ದ ಜನರಲ್ಲಿ ಆತಂಕ

ಚಾಲಕನ ಆಸನದಲ್ಲಿ ಯಾರೂ ಇಲ್ಲದೆ ಟ್ರಕ್ ರಸ್ತೆಯಲ್ಲಿ ಮುನ್ನುಗ್ಗುತ್ತಿದ್ದುದ್ದು ಭಾರಿ ಅಪಘಾತದ ಭೀತಿ ಸೃಷ್ಟಿಸಿತ್ತು. ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರ ವಾಹನ ಸವಾರರು ಹಾಗೂ ದಾರಿಹೋಕರು ಈ ದೃಶ್ಯ ಕಂಡು ದಿಗ್ಭ್ರಮೆಗೊಂಡರು. ಅಪಾಯವನ್ನು ತಪ್ಪಿಸಿಕೊಳ್ಳಲು ಕೆಲವರು ತಮ್ಮ ವಾಹನಗಳನ್ನು ರಿವರ್ಸ್ ತೆಗೆದುಕೊಂಡು ಸುರಕ್ಷಿತ ಅಂತರ ಕಾಯ್ದುಕೊಂಡರು.

ಕಠಿಣ ಕ್ರಮಕ್ಕೆ ಸ್ಥಳೀಯರಆಗ್ರಹ

ಬೃಹತ್ ವಾಹನಗಳನ್ನು ಚಾಲನೆ ಮಾಡುವಾಗ ಕ್ಷಣಮಾತ್ರದ ನಿರ್ಲಕ್ಷ್ಯವೂ ಪ್ರಾಣಾಂತಿಕ ಅಪಘಾತಕ್ಕೆ ದಾರಿ ಮಾಡಿಕೊಡುತ್ತದೆ. ಇಂತಹ ವಾಹನವನ್ನು ಚಾಲಕ ರಸ್ತೆಯಲ್ಲೇ ಬಿಟ್ಟು ನೃತ್ಯ ಮಾಡಿರುವುದು ಹೆದ್ದಾರಿ ಸುರಕ್ಷತೆಯನ್ನು ಪ್ರಶ್ನಿಸುವಂತೆ ಮಾಡಿದೆ.

ವಿಡಿಯೊ ವೈರಲ್ ಆಗುತ್ತಿದ್ದಂತೆ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸಿದ ಚಾಲಕನನ್ನು ತಕ್ಷಣವೇ ಪತ್ತೆ ಹಚ್ಚಿ ಬಂಧಿಸಬೇಕು ಎಂದು ಸ್ಥಳೀಯರು ಮತ್ತು ನೆಟ್ಟಿಗರು ಒತ್ತಾಯಿಸಿದ್ದಾರೆ. 

अलवर में इस ट्रक ड्राइवर ने तो लोगों की साँसे ऊपर नीचे कर दी





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries