ಕಾಸರಗೋಡು: ಓಣಂ ಸ್ಪೆಷಲ್ ಡ್ರೈವ್ ಕಾರ್ಯಾಚರಣೆಯನ್ವಯ ಕಾಸರಗೋಡು ಅಬಕಾರಿ ಸ್ಪೆಷಲ್ ಸ್ಕ್ವಾಡ್‍ನ ಅಸಿಸ್ಟೆಂಟ್ ಇನ್‍ಸ್ಪೆಕ್ಟರ್ ಸಿ.ಕೆ.ವಿ.ಸುರೇಶ್ (ಗ್ರೇಡ್) ನೇತೃತ್ವದ ತಂಡ ಬಳಾಲ್ ಎಂಬಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮನೆಯೊಂದರಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಗಾಗಿ ಸಿದ್ಧಪಡಿಸಲಾಗಿದ್ದ 100 ಲೀಟರ್ ಹುಳಿರಸ ಹಾಗೂ ಎರಡು ಲೀಟರ್ ಸಾರಾಯಿ ವಶಪಡಿಸಿಕೊಂಡಿದ್ದಾರೆ. ಪ್ರಕರಣಕಕೆ ಬಂಧಿಸಿ ಬಳಾಲ್ ಗ್ರಾಮದ ಕನಕಪಳ್ಳಿ ತಟ್ಟ ನಿವಾಸಿ ಕುಞÂಕೃಷ್ಣನ್.ಕೆ (54) ಎಂಬಾತನನ್ನು ಬಂಧಿಸಿದ್ದಾರೆ.


