ಕಾಸರಗೋಡು: ಪಾರ್ಟ್ ಟೈಮ್ ಕೆಲಸ ನೀಡುವ ಭರವಸೆಯೊಡ್ಡಿ ಯುವಕನಿಂದ 24.07 ಲಕ್ಷ ರೂ. ಎಗರಿಸಿದ ದೂರಿನಂತೆ ಓರ್ವನ ವಿರುದ್ಧ ಕಾಸರಗೋಡು ಸೈಬರ್ ಠಾಣೆಯ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಡೂರು ಪಾಂಡಿ ಕೊಟ್ಟಂಬಯಲ್ ನಿವಾಸಿ ಯುವಕ ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ತನ್ನನ್ನು ಸಂಪರ್ಕಿಸಿದ ಆರೋಪಿ, ಪಾರ್ಟ್‍ಟೈಂ ಉದ್ಯೋಗ ನೀಡುವುದಾಗಿ ತಿಳಿಸಿ 2025 ಡಿಸೆಂಬರ್ 30ರ ತನಕದ ಕಾಲಾವಧಿಯಲ್ಲಿ 24,72,813 ರೂ. ಲಪಟಾಯಿಸಿದ್ದು, ಇದರಲ್ಲಿ 65ಸಾವಿರ ರೂ. ಮಾತ್ರ ಹಿಂತಿರುಗಿಸಿದ್ದಾನೆ. ಕಮಿಷನ್ ಮೊತ್ತವನ್ನಾಗಲಿ, ಬಾಕಿ ಅಸಲು ಹಣವನ್ನಾಗಲಿ ನೀಡದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಘಿದೆ.

