ಕಾಸರಗೋಡು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪೋಕ್ಸೋ ಪ್ರಕರಣದ ಅಪರಾಧಿ ಬಾಳೆಹೊನ್ನೂರು ಬೀರಪ್ಪ ದೇವಸ್ಥಾನ ಸನಿಹದ ನಿವಾಸಿ ಹೇಲಪ್ಪ ಸುಬ್ಬಣ್ಣ ಹಿರೇಗಾರ (36) ಎಂಬಾತನಿಗೆ ಹೊಸದುರ್ಗ ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶ ಪಿ.ಎಂ. ಸುರೇಶ್ ಅವರು ಆರು ವರ್ಷ ಕಠಿಣ ಜೈಲುಶೀಕ್ಷೆ ಹಾಗೂ 30ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡ ಪಾವತಿಸದಿದ್ದಲ್ಲಿ ಅಪರಾಧಿ ಆರು ತಿಂಗಳ ಹೆಚ್ಚುವರಿ ಸಜೆ ಅನುಭವಿಸುವಂತೆಯೂ ತೀರ್ಪಿನಲ್ಲಿ ತಿಳಿಸಲಾಗಿದೆ. 2025 ಜುಲೈ 16ರಂದು ಮೇಲ್ಪಂಬ ಪೆÇಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ದೂರಿನನ್ವಯ ಪೆÇಲೀಸರು ಹೇಲಪ್ಪ ಸುಬ್ಬಣ್ಣ ಹಿರೇಗಾರ ವಿರುದ್ಧ ಪೆÇೀಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಎಸ್.ಐ ಎ.ಎನ್.ಸುರೇಶ್ ಕುಮಾರ್ ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.


