ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಇಚ್ಲಂಗೋಡು ಚಿತ್ತೂರ್ ನಿವಾಸಿ ದಿ. ಕುಂಞಪಳ್ಳಿ ಎಂಬವರ ಪುತ್ರ ಅಬ್ದುಲ್ ಸಲೀಂ (33) ಅವರ ಮೃತದೇಹ ಮನೆಯ ಹಾಲ್‍ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ
ಅಬ್ದುಲ್‍ಸಲೀಂ ಅವರ ತಾಯಿ ತನ್ನ ಪುತ್ರಿ ಮನೆಗೆ ತೆರಳಿದ್ದು, ಮನೆಯಲ್ಲಿ ಬೇರೆ ಯಾರೂ ಇಲ್ಲದ ಸಂದರ್ಭ ಅಬ್ದುಲ್ ಸಲೀಂ ಕೃತ್ಯವೆಸಗಿದ್ದರು. ಶನಿವಾರ ಬೆಳಿಗ್ಗೆ ಸ್ಥಳೀಯರು ಮಾಹಿತಿ ಪಡೆದು ಮನೆಗೆ ತೆರಳಿ ನೋಡಿದಾಗ ಅಬ್ದುಲ್ ಸಲೀಂ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


