ಕಾಸರಗೋಡು: ನಾಪತ್ತೆಯಾಗಿದ್ದ ಹೊಸದುರ್ಗ ಮಣ್ಣಾಟ್ ದೇವಾಲಯ ಸಮೀಪದ ವಡಾನ್ ವಳಪ್ಪಿನ ಸಿರಾಯುಧನ್ ಎಂಬವರ ಪತ್ನಿ ಕೆ. ರಮ (62) ಅವರ ಮೃತದೇಹ ಬಾವಿಯಲ್ಲಿಪತ್ತೆಯಾಗಿದೆ. ರಮಾ ಅವರು ಗುರುವಾರ ಮನೆಯಿಂದ ಹೊರಟವರು ನಂತರ ವಾಪಸಾಘದ ಹಿನ್ನೆಲೆಯಲ್ಲಿ ಮನೆಯವರು ನೀಡಿದ ದದೂರಿನನ್ವಯ ಹೊಸದುರ್ಗ ಠಾನೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದರು. ಪೆÇಲೀಸರು ತನಿಖೆ ನಡೆಸುತ್ತಿದ್ದಂತೆಯೇ ಮನೆ ಪಕ್ಕದ ಕೊವ್ವಲ್‍ಪಳ್ಳಿಯ ಹಿತ್ತಲ ಬಾವಿಯಲ್ಲಿ ರಮಾ ಅವರ ಮೃತದೇಹ ಪತ್ತೆಯಾಗಿದೆ.

