ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಶಾಲಾ ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ವಾರ್ಡ್ ಸದಸ್ಯೆ ನಾಜಿಯಾ ಅಜೀಜ್ ಉದ್ಘಾಟಿಸಿದರು. ಮಂಜೇಶ್ವರ ಬಿ.ಆರ್.ಸಿ.ಯ. ಬಿ.ಪಿ.ಸಿ. ರಾಜಗೋಪಾಲ್ ಅವರು ಓಣಂ ಆಚರಣೆಯ ಔಚಿತ್ಯವನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಅರಣ್ಯ ಇಲಾಖೆಯ ವತಿಯಿಂದ ಮೃಗ ಸಂರಕ್ಷಣಾ ಯೋಜನೆಯ ಭಾಗವಾಗಿ ರೇಬಿಸ್ ಮುನ್ನೆಚ್ಚರಿಕೆ ಕುರಿತು ಜಾಗೃತಿ ತರಗತಿಯನ್ನು ವಿಷ್ಣು ಕೃಷ್ಣನ್ ಸರ್ ನಡೆಸಿಕೊಟ್ಟರು.ಯೋಗ ಇನ್ಸ್ಟ್ರಕ್ಟರ್ ತಾರಾ ಕೆ, ಹಿರಿಯ ಶಿಕ್ಷಕರಾದ ರಿಯಾಸ್ ಪೆರಿಂಗಡಿ ಹಾಗೂ ವಾಣಿ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಓಣಂ ಆಚರಣೆಯ ಅಂಗವಾಗಿ ಅಬ್ದುಲ್ ಬಶೀರ್ ಹಾಗೂ ಜಸಿಲಾ ಟೀಚರ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಕರಾದ ಧನ್ಯ ಮತ್ತು ಅನುಕೃಷ್ಣ ಅವರ ನೇತೃತ್ವದಲ್ಲಿ ಆಕರ್ಷಕ ಪೂಕಳಂ ರಚಿಸಲಾಯಿತು.
ಮಹಾಬಲಿ ವೇಷಧಾರಿಯಾಗಿದ್ದ ಮೊಹಿನುದ್ದೀನ್ ಅಯಾನ್ ಅವರನ್ನು ಓಣಂ ಹಾಡಿನ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು.ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ರೇಷ್ಮಾ ಸ್ವಾಗತಿಸಿ, ಶಿಕ್ಷಕಿ ಐಶ್ವರ್ಯ ವಂದಿಸಿದರು. ಶಿಕ್ಷಕಿ ಆಯಿಷತ್ ಸೈನಾಜ್ ಕಾರ್ಯಕ್ರಮ ನಿರೂಪಿಸಿದರು.

.jpg)
.jpg)
