ಪೆರ್ಲ: ಜ್ವರ ಬಾಧಿಸಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಣ್ಮಕಜೆ ಪಂಚಾಯಿತಿ ಪಡ್ರೆ ಸಜಂಗಡ್ಡೆ ನಿವಾಸಿ ಟೀಲು ನಾಯ್ಕ (58)ಮೃತಪಟ್ಟಿದ್ದಾರೆ. ಕೂಲಿ ಕಾರ್ಮಿಕರಾಗಿದ್ದ ಇವರಿಗೆ ಇತ್ತೀಚೆಗೆ ಜ್ವರ ಬಾಧಿಸಿತ್ತು. ಇದಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಳಿಕ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಬುಧವಾರ ಮನೆಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಕಂಡುಬಂದಿದ್ದ ಇವರನ್ನು ತಕ್ಷಣ ಉಕ್ಳಿನಡ್ಕ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ ಪ್ರಯೋಜನವಾಗಿರಲಿಲ್ಲ.


