ಮುಳ್ಳೇರಿಯ: ಬೋವಿಕ್ಕಾನ ಸಮೀಪದ ಪೆÇವ್ವಲ್ ಮಾಸ್ತಿಕುಂಡ್ ಎಂಬಲ್ಲಿ ಶಾಲಾ ವಾಹನ ಮತ್ತು ಬೈಕ್ ಪರಸ್ಪರ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಗಾಳಿಮುಖ ಗೋಳಿತ್ತಡಿ ನಿವಾಸಿ ಷಮ್ಮಾಸ್ ಅಬ್ದುಲ್ಲ(25) ಮೃತಪಟ್ಟಿದ್ದಾರೆ. ಗುರುವಾರ ಬೆಳಗ್ಗೆ ಅಪಘಾತ ನಡೆದಿದೆ.
ಕೋಯಿಕ್ಕೋಡ್‍ನಲ್ಲಿ ಜ್ಯೂಸ್ ಅಂಗಡಿಯೊಂದರಲ್ಲಿ ನೌಕರನಾಗಿದ್ದ ಷಮ್ಮಾಸ್ ಅಬ್ದುಲ್ಲ ಬುಧವಾರ ರಾತ್ರಿ ಹೊರಟು ಬೆಳಿಗ್ಗೆ ಕಾಸರಗೋಡು ತಲುಪಿದ್ದರು. ಬಳಿಕ ಬೈಕ್ ನಲ್ಲಿ ಗಾಳಿಮುಖದ ಮನೆಗೆ ತೆರಳುವಾಗ ಮಾಸ್ತಿಕುಂಡ್‍ನಲ್ಲಿ ಶಾಲಾ ವಾಃನ ಮತ್ತು ಬೈಕ್ ಡಿಕ್ಕಿಯಾಗಿದೆ. ಬೈಕಿಂದ ಬಿದ್ದ ಇವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.

