ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಆ.09 ರಂದು ಭಾನುವಾರ ವಿಶಿಷ್ಟವಾದ ಕರ್ಕಾಟಕ ಮಾಸದ ಔಷಧಿ ಗಂಜಿ ಕಾರ್ಯಕ್ರಮ ನಡೆಯಲಿರುವುದು. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ಆರೋಗ್ಯ ಯೋಜನೆಯಾದ ಶ್ರೀ ನಿತ್ಯಾನಂದ ಆಯುರ್ವೇದಿಕ್ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ, ಕೇರಳದ ಪಾರಂಪರಿಕ ನಾಟಿ ವೈದ್ಯರುಗಳು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ನಮ್ಮ ಸುತ್ತ ಮುತ್ತಲಿನ ಗಿಡ ಬಳ್ಳಿ ಎಲೆಗಳ ಬಳಕೆಯಿಂದ ವಿಶಿಷ್ಟ ಗಂಜಿ ತಯಾರು ಮಾಡುವುದಲ್ಲದೆ ಅವುಗಳ ಮಹತ್ವವನ್ನು ಪವಿತ್ರನ್ ಗುರುಕ್ಕಳ್ ಕಣ್ಣೂರು ಮತ್ತು ವಿ.ಸಿ ಬಾಲಕೃಷ್ಣನ್ ಕಣ್ಣೂರು ಮಳಯಾಳಂನಲ್ಲಿ ತಿಳಿಸಿಕೊಡಳಿದ್ದಾರೆ. ಶಾರದಾ ಆಯುರ್ವೇದಿಕ್ ಕಾಲೇಜಿನ ಪ್ರಾಧ್ಯಾಪಕ ಡಾ.ಅನೂಪ್ ಅವರು ಕರ್ಕಾಟಕ ಮಾಸದ ಔಷಧ ಗಂಜಿಯ ಮಾಹಿತಿಯನ್ನು ಕನ್ನಡದಲ್ಲಿ ತಿಳಿಸಿಕೊಡಲಿದ್ದಾರೆ. ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಸಾನಿಧ್ಯವಹಿಸಿ ಆಶೀರ್ವಚನ ನೀಡುವರು. ತುಳುನಾಡು ಎಜ್ಯಕೇಷನಲ್ ಟ್ರಸ್ಟಿನ ಅಧ್ಯಕ್ಷ ಡಾ. ಎಮ್.ಬಿ ಪುರಾಣಿಕ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಳಾಗಿ ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಿವಪ್ರಸಾದ್ ಎಸ್. ಶೆಣೈ, ಜಯದೇವನ್ ಕಣ್ಣೂರು ಪಾಳ್ಗೊಳ್ಳುವರು. ಇದೇ ಸಂದರ್ಭ ಕೇರಳದ ಪ್ರಸಿಧ್ಧ ನಾಟಿ ವೈದ್ಯ ಶರೀಫ್ ಪರಾಲ್ ಅವರಿಗೆ ಆಯುಶ್ರೀ ಪ್ರಶಸ್ಸ್ತಿ ಪ್ರಧಾನ ಮಾಡಲಾಗುವುದು. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಶ್ರೀ ಮಠದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

