ಬದಿಯಡ್ಕ: ಕ್ಯಾಂಪ್ಕೋ ಸದಸ್ಯ ನಾರಾಯಣ ಕೆ. ಅವರ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಕ್ಯಾಂಪ್ಕೋ ವತಿಯಿಂದ 2 ಲಕ್ಷ ರೂ. ಧನಸಹಾಯವನ್ನು ಅವರ ನಿವಾಸಕ್ಕೆ ತೆರಳಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಕ್ಯಾಂಪ್ಕೋದ ಸಾಂತ್ವನ (ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ) ಯೋಜನೆಯಡಿ ಮಂಜೂರಾದ ಮೊತ್ತವನ್ನು ಕ್ಯಾಂಪ್ಕೋ ನಿರ್ದೇಶಕ ಸತ್ಯನಾರಾಯಣ ಪ್ರಸಾದ್, ಸತೀಶ್ಚಂದ್ರ ಭಂಡಾರಿ, ಹಾಗೂ ಗಣೇಶ್ ಕುಮಾರ್ ಎ. ಅವರು ಪಾರಕಟ್ಟೆಯ ಉಷಾ ನಾರಾಯಣನ್ ಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬದಿಯಡ್ಕ ಸ್ಥಾನೀಯ ಪ್ರಬಂಧಕ ಚಂದ್ರ ಎಂ., ಕ್ಯಾಂಪ್ಕೋ ಮುಳಿಯಾರು ಶಾಖಾ ವ್ಯವಸ್ಥಾಪಕರು ಹಾಗೂ ಕಾಸರಗೋಡು ಶಾಖಾ ವ್ಯವಸ್ಥಾಪಕರು ಉಪಸ್ಥಿತರಿದ್ದರು.

.jpg)
