ಕುಂಬಳೆ: ನಮ್ಮ ಪ್ರದೇಶದಲ್ಲಿ ಹಿಮ್ಮೆಟ್ಟುತ್ತಿರುವ ಕೃಷಿ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು ಮತ್ತು ಉತ್ತೇಜಿಸಲು ಪುತ್ತಿಗೆ ಗ್ರಾಮ ಪಂಚಾಯತಿ ಕುಟುಂಬಶ್ರೀ ಸಿ.ಡಿ.ಎಸ್ ವತಿಯಿಂದ ನಡೆಸಲಾಗುತ್ತಿರುವ ಅಕ್ಕಿ ಬೆಳೆ ಯೋಜನೆ 'ಕೆಸರು ಗದ್ದೆ'ಗೆ ಚಾಲನೆ ನೀಡಲಾಯಿತು. ಪುತ್ತಿಗೆ ಪಂಚಾಯತಿಯ ಸಂತೆಕಟ್ಟೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಯು.ಕೆ. ಸೈಫುಲ್ಲ ತಂಙಳ್ ಅವರು ನಾಟಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಫಿದ ಊಜಂಪದವು, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸಕ್ಕೀನಾ ಐ.ಎ., ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ, ಪಂಚಾಯತಿ ಸದಸ್ಯರಾದ ಬಾಲಕೃಷ್ಣ ರೈ ಗುತ್ತು, ಪುಷ್ಪಲತಾ, ರೂಪಾ, ಅನಿತಾ, ಲಲಿತಾ, ಶಿವಪ್ಪ ರೈ ಹಾಗೂ ಬ್ಲಾಕ್ ಪಂಚಾಯತಿ ಸದಸ್ಯರಾದ ಜುನೈದ್, ಮಿಸ್ರಿಯಾ, ಬಶೀರ್ ಕೊಟ್ಟೂಡಲ್ ಮತ್ತು ಸಿಡಿಎಸ್ ಅಧ್ಯಕ್ಷೆ ಜಯಂತಿ ಅವರು ನಾಟಿ ನೆಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಿಡಿಎಸ್ ಸದಸ್ಯರು ಹಾಗೂ ವಿವಿಧ ಕ್ಲಬ್ ಸದಸ್ಯರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

.jpg)
.jpg)
