ಕಾಸರಗೋಡು: ಅತಿಯಾದ ಪ್ರಮಾಣದಲ್ಲಿ ಮಾತ್ರೆ ಸೇವಿಸಿದ ಪರಿಣಾಮ ಅಸೌಖ್ಯಗೊಂಡಿದ್ದ ವಿದ್ಯಾರ್ಥಿನಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕೊಚ್ಚಿ ನಿವಾಸಿ, ಕುಂಬಳೆಯ ಕಾಲೇಜೊಂದರ ವಿದ್ಯಾರ್ಥಿನಿಯಾದ 18ರ ಹರೆಯದ ಯುವತಿಯನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಬುಧವಾರ ಈಕೆಯನ್ನು ಅಸೌಖ್ಯಪೀಡಿತ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದ್ದು, ತಕ್ಷಣ ಈಕೆಯನ್ನು ಆಸ್ಪತ್ರೆಗೆ ತಲುಪಿಸಿ ತಪಾಸಣೆ ನಡೆಸಿದಾಗ ಅತಿಯಾದ ಪ್ರಮಾಣದಲ್ಲಿ ಮಾತ್ರೆ ಸೇವಿಸಿರುವುದು ತಿಳಿದುಬಂದಿತ್ತು.

