ಕಾಸರಗೋಡು: ಓಣಂ ಸ್ಪೆಷಲ್ ಡ್ರೈವ್‍ನನ್ವಯ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 2.06 ಗ್ರಾಂ ಮಾರಕ ಮೆಥಾಫಿಟಮಿನ್ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ನೆಕ್ರಾಜೆ ಗ್ರಾಮದ ಕರಿಯಪಳ್ಳಂ ನಿವಾಸಿ ಮುಹಮ್ಮದ್ ಹನೀಫ್ ಕೆ. (40)ಎಂಬಾತನನ್ನು ಬಂಧಿಸಲಾಗಿದೆ.
ಕಾಸರಗೋಡು ಎ.ಇ. ಆ್ಯಂಡ್ ಎ.ಎನ್.ಎಸ್.ಎಸ್.ಎನ್ ಅಬಕಾರಿ ಇನ್ಸ್‍ಪೆಕ್ಟರ್ ವಿಶ್ವಪ್ರಕಾಶ್ ನೇತೃತ್ವದ ತಂಡ ನೆಕ್ರಾಜೆ ಕರಿಯಪಳ್ಳದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

