ಉಪ್ಪಳ: ಶಾಲೆಯಲ್ಲಿ ಸಹಪಾಠಿಗಳೊಂದಿಗೆ ಆಟವಾಡುತ್ತಿದ್ದ ಸಂದರ್ಭ ಕಣ್ಣಿಗೆ ಪೆನ್ಸಿಲ್ ಚುಚ್ಚಿದ ಪರಿಣಾಮ ಮೂರರ ಹರೆಯದ ಮಗು ಗಂಭೀರ ಗಾಯಗೊಂಡಿದೆ. ಉಪ್ಪಳ ಎಮ್.ಎಲ್.ಪಿ ಶಾಲೆಯೊಂದರ ಎಲ್.ಕೆ.ಜಿ ವಿದ್ಯಾರ್ಥಿಯೂ ಉಪ್ಪಳ ಕೈಕಂಬ ನಿವಾಸಿಯಾದ ಮೂರರ ಹರೆಯದ ಮಗು ಗಾಯಾಳು.
ತಕ್ಷಣ ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಉನ್ನತ ಚಿಕಿತ್ಸೆಗಾಗಿ ಮಗುವನ್ನು ಕೋಯಂಬತ್ತೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಜುಲೈ 29ರಂದು ಮಗುವಿನ ಕಣ್ಣಿಗೆ ಬಲದ ಕಣ್ಣಿಗೆ ಗಾಯವುಂಟಾಗಿತ್ತು.


