ಕುಂಬಳೆ: ನೆಕ್ರಾಜೆ ನಿವಾಸಿ, 30ರಹರೆಯದ ಮಹಿಳೆಯೊಬ್ಬರ ಕುಡಿಯುವ ನೀರಿನ ಬಾಟಲಿಗೆ ಇಬ್ಬರು ಸಹೋದ್ಯೋಗಿಗಳು ಮೂತ್ರ ವಿಸರ್ಜನೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಠಾಣೆ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೊಗ್ರಾಲ್‍ನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ವೈಶಾಖ್ ಹಾಗೂ ಎಬಿನ್ ವಿರುದ್ಧ ಈ ಕೇಸು. ಜುಲೈ 25ರ ಸಂಜೆ 5 ಗಂಟೆಯಿಂದ ಜುಲೈ 27ರ ಬೆಳಿಗ್ಗೆ 9.30ರೊಳಗಿನ ಕಾಲಾವಧಿಯಲ್ಲಿ ಘಟನೆ ನಡೆದಿದೆ. ಮಹಿಳೆ ಕುಡಿಯಲು ಬಳಸುತ್ತಿದ್ದ ನೀರಿನ ಬಾಟಲಿಯನ್ನು ಸಂಸ್ಥೆಯ ಕಚೇರಿಯ ಕ್ಯಾಬಿನ್‍ನಲ್ಲಿ ಇರಿಸಿದ್ದು, ಇದಕ್ಕೆ ಆರೋಪಿಗಳು ಮೂತ್ರ ವಿಸರ್ಜನೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ತನಿಖೆ ಆರಂಭಿಸಿದ್ದಾರೆ.

