ಕಾಸರಗೋಡು: ರಸ್ತೆ ದಾಟುವ ಮಧ್ಯೆ ಬೈಕ್ ಡಿಕ್ಕಿಯಗಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಗೃಹಿಣಿ ಮೃತಪಟ್ಟಿದ್ದಾರೆ. ಹೊಸದುರ್ಗದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಸಮೀಪದ ನಿವಾಸಿ ರಾಣಿ(60) ಮೃತಪಟ್ಟವರು. ಜೂನ್ 24 ರಂದು ಸಂಜೆ, ರಾಣಿ ಅವರು ವಿನಾಯಕ ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿರುವ ಮಧ್ಯೆ ಬೈಕ್ ಡಿಕ್ಕಿಯಾಗಿದೆ.
ಅತಿಯಾದ ವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿರುವುದರಿಂದ ಅಪಘಾತ ಸಂಭವಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಡಿಕ್ಕಿಯಾದ ಬೈಕ್ ಪರಾರಿಯಾಗಿದ್ದು, ಇದುವರೆಗೆ ಪತ್ತೆ ಸಾಧ್ಯವಾಗಿಲ್ಲ.


