ಉಪ್ಪಳ: ಉಪ್ಪಳ ಮುಸೋಡಿ ಸಮುದ್ರ ದಡದಲ್ಲಿ ಪತ್ತೆಯಾಗಿದ್ದ ಮೃತದೇಹ ತಿರುವನಂತಪುರದಿಂದ ನಾಪತ್ತೆಯಾಗಿದ್ದ ವಿ. ರಾಜನ್ (64) ಅವರದ್ದೆಂದು ಕರಾವಳಿ ಠಾಣೆ ಪೋಲೀಸರು ಮಾಹಿತಿ ನೀಡಿದ್ದಾರೆ.
ರಾಜನ್ ಅವರು ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದು ಜುಲೈ 27ರ ರಾತ್ರಿ ಮನೆಯಿಂದ ಹೊರಟ ಬಳಿಕ ಅವರು ನಾಪತ್ತೆಯಾಗಿದ್ದು, ಈ ಬಗ್ಗೆ ಮನೆಯವರು ತಿರುವನಂತಪುರ ಕಾಂಜಿರಂಕುಳಂ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಶುಕ್ರವಾರ ಮಧ್ಯಾಹ್ನ ಮುಸೋಡಿ ಸಮುದ್ರ ತೀರದಲ್ಲಿ ಮೃತದೇಹ ಪತ್ತೆಯಾಗಿತ್ತು. ಮಂಜೇಶ್ವರ ಪೋಲೀಸರು ಹಾಗೂ ಕರಾವಳಿ ಠಾಣೆ ಪೆÇಲೀಸರು ನಡೆಸಿದ ತನಿಖೆಯಿಂದ ಮೃತದೇಹದ ಗುರುತು ಪತ್ತೆಹಚ್ಚಲಾಗಿದೆ.

.jpg)
