ಕಾಸರಗೋಡು: ನಗರದ ಪಾರೆಕಟ್ಟ ಕನ್ನಡ ಗ್ರಾಮದಲ್ಲಿ ಕಾಸರಗೋಡು ನಗರಸಭೆ ಆಯುರ್ವೇದ ಆಸ್ಪತ್ರೆ ವತಿಯಿಂದ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ಜರುಗಿತು. ಕಾಸರಗೋಡು ನಗರಸಭೆ ಹಾಗೂ ಕಾಸರಗೋಡು ನಗರಸಭಾ ಆಯುರ್ವೇದ ಆಸ್ಪತ್ರೆ ನುಳ್ಳಿಪ್ಪಾಡಿ ಅಣಂಗೂರು ಸಂಯುಕ್ತ ಆಶ್ರಯದಲ್ಲಿ ಶಿಬಿರ ಆಯೋಜಿಸಲಾಗಿತ್ತು.
ಕಾಸರಗೋಡು ನಗರಸಭಾ ಕೌನ್ಸಿಲರ್ ಶಾರದಾ ಬಿ. ಶಿಬಿರ ಉದ್ಘಾಟಿಸಿದರು. ಕಾಸರಗೋಡು ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿ ಮಾಥನಾಡಿ, ಕಾಸರಗೋಡು ಕನ್ನಡ ಗ್ರಾಮದಲ್ಲಿ ಪ್ರತಿ ತಿಂಗಳ ಒಂದು ದಿನ ಕಾಸರಗೋಡು ನಗರ ಸಭೆ ಆಯುರ್ವೇದ ಆಸ್ಪತ್ರೆ ವತಿಯಿಂದ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ಮತ್ತು ಔಷಧ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಅವರು, ಕನ್ನಡ ಗ್ರಾಮದಲ್ಲಿ ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ 2026 ನವಂಬರ್ 28 ಮತ್ತು 29ರಂದು ಎರಡು ದಿನಗಳ ಕಾಲ ನಡೆಯಲಿರುವ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ ಮತ್ತು ಕೇರಳ-ಕರ್ನಾಟಕ ಉತ್ಸವದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಕಾಸರಗೋಡು ನಗರಸಭೆ ಆಯುರ್ವೇದ ಆಸ್ಪತ್ರೆಯ ಡಾ.ರಾಜು ಹಾಗೂ ಡಾ. ಪ್ರವೀಣ ಕೆ, ಅವರು ಮೂಳೆ ಸಂಧಿ ನೋವು ,ಬೆನ್ನು ನೋವು ,ಕುತ್ತಿಗೆ ನೋವು ಹಾಗೂ ಇತರ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಉಚಿತ ತಪಾಸಣೆ ಮತ್ತು ಮಾಹಿತಿ ನೀಡಿದರು. ಕಾಸರಗೋಡು ನಗರಸಭಾ ಮಾಜಿ ಕೌನ್ಸಿಲರ್ ಶಂಕರ ಕೆ.ಜೆ.ಪಿ ನಗರ ಸ್ವಾಗತಿಸಿದರು. ಅನುರಾಜ್ ವಂದಿಸಿದರು. ಕನ್ನಡ ಗ್ರಾಮ ಕುಶಲ ಕುಮಾರ ಕೆ. ಸಹಕರಿಸಿದರು.



