ಕಾಸರಗೋಡು: ಮಧೂರು ಉಳಿಯತಡ್ಕದಲ್ಲಿ ಚಟುವಟಿಕೆ ನಡೆಸುತ್ತಿರುವ 'ಪ್ರಗತಿ ವಿಶೇಷ ವಿಕಲಚೇತನ' ಶಾಲೆಯಲ್ಲಿ ಪೋಲೀಸರೊಂದಿಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು. ವಿದ್ಯಾನಗರ ಪೆÇಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ವಿಜಯನ್ ಮೇಲೋತ್ ಸಮಾರಂಭ ಉದ್ಘಾಟಿಸಿದರು. ಶಾಲಾ ಟ್ರಸ್ಟಿನ ಉಪಾಧ್ಯಕ್ಷ ಅಶೋಕ ರೈ ಎಂ ಅಧ್ಯಕ್ಷತೆ ವಹಿಸಿದ್ದರು. ಪೆÇಲೀಸ್ ಅಧಿಕಾರಿ ಶ್ರೀಜಿತ್ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲ ಉದಯಕುಮಾರ್ ಕೆ ಸ್ವಾಗತಿಸಿದರು.


