ಕುಂಬಳೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.)ವತಿಯಿಂದ ಮಂಜೇಶ್ವರ ತಾಲೂಕಿನ ಕುಂಬಳೆಯ ಶೇಡಿಕಾವು ಶ್ರೀ ಕೃಷ್ಣ ವಿದ್ಯಾಲಯದ ಭೋಜನ ಶಾಲೆ ನಿರ್ಮಾಣಕ್ಕಾಗಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿರುವ ಒಂದು ಲಕ್ಷ ರೂಪಾಯಿ ಮೊತ್ತದ ಅನುದಾನ ಮಂಜೂರಾತಿ ಪತ್ರವನ್ನು ಶಾಲಾಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು.
ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿರುವ ಸಂಸ್ಥೆಯು, ಶಾಲಾ ಮಕ್ಕಳ ಬಿಸಿಯೂಟ ವ್ಯವಸ್ಥೆ ಹಾಗೂ ಮೂಲಸೌಕರ್ಯ ವೃದ್ಧಿಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಈ ಅನುದಾನವನ್ನು ಮಂಜೂರು ಮಾಡಿದೆ. ಮಂಜೇಶ್ವರ ತಾಲೂಕಿನ ಯೋಜನಾಧಿಕಾರಿಗಳಾದ ಶಶಿಕಲಾ ಸುವರ್ಣ, ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷ ಮಹೇಶ್ ಪುಣಿಯೂರ್, ವಲಯ ಮೇಲ್ವಿಚಾರಕ ಅಭಿಷೇಕ್ ಹಾಗೂ ಸೇವಾಪ್ರತಿನಿಧಿ ಸಂಧ್ಯಾ, ಶಾಲಾ ಸಮಿತಿ ಪದಾಧಿಕಾರಿ ರಾಧಾಕೃಷ್ಣ ರೈ ಮಡ್ವ, ಮುಖ್ಯ ಶಿಕ್ಷಕಿ ಸರಿತ ದಿನೇಶ್ ಉಪಸ್ಥಿತರಿದ್ದರು.



