HEALTH TIPS

ಸೈಬರ್ ವಂಚನೆ ಕಡಿವಾಣಕ್ಕಾಗಿ ಸಿಮ್ ಕಾರ್ಡ್‌ ವಿತರಣೆ ನಿಯಮ ಬಿಗಿಗೊಳಿಸಲು ಕೇಂದ್ರ ಸರಕಾರ ಸಿದ್ಧತೆ : ವರದಿ

ನವದೆಹಲಿ :  'ಡಿಜಿಟಲ್ ಬಂಧನ' ಸೇರಿದಂತೆ ಸೈಬರ್ ವಂಚನೆಗಳಿಗೆ ಕಡಿವಾಣ ಹಾಕುವ ಪ್ರಯತ್ನವಾಗಿ ಕೇಂದ್ರ ಸರಕಾರವು ನೂತನ ಸಿಮ್ ಕಾರ್ಡ್‌ಗಳ ವಿತರಣೆಗೆ ಸಂಬಂಧಿಸಿದ ಪರಿಶೀಲನಾ ಪ್ರಕ್ರಿಯೆಯನ್ನು ಬಿಗಿಗೊಳಿಸಲು ಮುಂದಾಗಿದೆ. 


ಪ್ರಸ್ತಾವಿತ ಕ್ರಮಗಳಡಿಯಲ್ಲಿ ಟೆಲಿಕಾಂ ಕಂಪೆನಿಗಳು ನೂತನ ಸಿಮ್ ಕಾರ್ಡ್ ಅನ್ನು ಸಕ್ರಿಯಗೊಳಿಸುವ ಮುನ್ನ 'ಸೈಬರ್ ವಂಚನೆ ತಡೆಗಾಗಿ ಸ್ಥಾಪಿಸಲಾದ 'ರಿಯಲ್ ಟೈಮ್ ಡಿಜಿಟಲ್ ಇಂಟೆಲಿಜೆನ್ಸ್ ಪ್ಲ್ಯಾಟ್‌ಫಾರಂ' ಮೂಲಕ ಗ್ರಾಹಕನ ವಿವರಗಳನ್ನು ಕಡ್ಡಾಯವಾಗಿ ದೃಢಪಡಿಸಿಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ.

ಯಾವುದೇ ಅನುಮಾನಾಸ್ಪದ ವ್ಯಕ್ತಿಯು ಸಿಮ್ ಪಡೆದಿರುವುದು ಕಂಡುಬಂದಲ್ಲಿ ಕೂಡಲೇ ಸಿಮ್ ಸಂಪರ್ಕ ನೀಡುವುದನ್ನು ಟೆಲಿಕಾಂ ಕಂಪೆನಿಯ ನಿರ್ವಾಹಕರು ತಡೆಯಬೇಕಾಗುತ್ತದೆ. ಅಲ್ಲದೆ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಎಷ್ಟು ಸಿಮ್‌ಗಳು ನೋಂದಣಿಯಾಗಿದೆ ಎಂಬುದನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆಯನ್ನು ಬಲಪಡಿಸಲು ಕೂಡಾ ಸರಕಾರ ಕ್ರಮಗಳನ್ನು ಕೈಗೊಳ್ಳಲಿದೆ.

ಪ್ರಸಕ್ತ ಓರ್ವ ವ್ಯಕ್ತಿಯು ಗರಿಷ್ಠ 9 ಸಿಮ್‌ಗಳನ್ನು ಪಡೆಯಬಹುದಾಗಿದ್ದು, ಜಮ್ಮುಕಾಶ್ಮೀರ, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಅದರ ಮಿತಿಯನ್ನು ಆರಕ್ಕೆ ನಿಗದಿಪಡಿಸಿದೆ.

ಸೈಬರ್ ವಂಚನೆ , ಡಿಜಿಟಲ್ ಆರೆಸ್ಟ್ ಮತ್ತಿತರ ವಂಚನೆ ಚಟುವಟಿಕೆಗಳಿಗಾಗಿ ನಕಲಿ ಗುರುತನ್ನು ನೀಡಿ ಸಿಮ್‌ಗಳನ್ನು ಪಡೆಯುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆಯೆಂದು ಮೂಲಗಳು ತಿಳಿಸಿವೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries