ಕೊಚ್ಚಿ: ಪೋಲೀಸ್ ಠಾಣೆಗಳ ಕಾರ್ಯನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಇಂದಿನಿಂದ ಎಸ್‍ಎಚ್‍ಒಗಳ ಕರ್ತವ್ಯಗಳನ್ನು ವಿಭಜಿಸಲಾಗುತ್ತಿದೆ.
ಪ್ರಸ್ತುತ ಕಾನೂನು ಮತ್ತು ಸುವ್ಯವಸ್ಥೆಯಿಂದ ಹಿಡಿದು ಕೊಲೆ ಪ್ರಕರಣಗಳ ತನಿಖೆಯವರೆಗೆ ಎಲ್ಲವನ್ನೂ ನಿಭಾಯಿಸುತ್ತಿದ್ದ ಎಸ್‍ಎಚ್‍ಒಗಳು ಹೆಚ್ಚಿನ ಕೆಲಸದ ಹೊರೆಯಿಂದಾಗಿ ತೊಂದರೆ ಅನುಭಸುತ್ತಿರುವ ಕಾರಣ ಗೃಹ ಇಲಾಖೆಯ ಹೊಸ ನಿರ್ಧಾರ ಕೈಗೊಂಡಿದೆ. ಕರ್ತವ್ಯಗಳ ವಿಭಜನೆಯು ಪ್ರಕರಣಗಳ ತನಿಖೆಯನ್ನು ವೇಗಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇಂದಿನಿಂದ, ಗಂಭೀರ ಅಪರಾಧಗಳ ತನಿಖೆ ಮತ್ತು ಸಾಕ್ಷ್ಯಗಳ ಸಂಗ್ರಹವು ಸಿಐಗಳ ನೇರ ನೇತೃತ್ವದಲ್ಲಿ ನಡೆಯಲಿದೆ. ಇದು ದೊಡ್ಡ ಪ್ರಕರಣಗಳ ತನಿಖೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.
ಎಸ್‍ಐಗಳು ಇನ್ನು ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ಠಾಣೆ ಮಟ್ಟದಲ್ಲಿ ದೈನಂದಿನ ವ್ಯವಹಾರಗಳನ್ನು ನಿರ್ವಹಿಸುತ್ತಾರೆ. ಸ್ಥಳೀಯ ಪೋಲೀಸರ ಚಟುವಟಿಕೆಗಳ ಬಗ್ಗೆ ದೂರುಗಳು ಅಥವಾ ಅತೃಪ್ತಿ ಹೊಂದಿರುವವರು ಈಗ ಸುಲಭವಾಗಿ ಸಿ.ಐ ಗಳನ್ನು ಸಂಪರ್ಕಿಸಿ ತಮ್ಮ ದೂರುಗಳನ್ನು ತಿಳಿಸಬಹುದು.
ಸಿಐಗಳು ನೇರವಾಗಿ ಮಧ್ಯಪ್ರವೇಶಿಸಿ ಠಾಣೆ ಮಟ್ಟದಲ್ಲಿ ಪರಿಹರಿಸಲಾಗದ ದೂರುಗಳು ಮತ್ತು ವಿವಾದಗಳನ್ನು ಪರಿಹರಿಸುತ್ತಾರೆ. ತುರ್ತು ಸಂದರ್ಭಗಳಲ್ಲಿ ಅI ಗಳು ಬಹು ಠಾಣೆಗಳ ಪೆÇಲೀಸ್ ಪಡೆಯನ್ನು ಸಂಯೋಜಿಸುವ ಮೂಲಕ ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗುತ್ತದೆ.
ಈ ಹೊಸ ಸುಧಾರಣೆಯ ಅನುಷ್ಠಾನದೊಂದಿಗೆ, ಪೋಲೀಸ್ ವ್ಯವಸ್ಥೆಯು ಜನರಿಗೆ ಹೆಚ್ಚು ಸುಲಭವಾಗಿ ಲಭ್ಯವಾಗುತ್ತದೆ ಮತ್ತು ಪ್ರಕರಣದ ತನಿಖೆಗಳು ಹೆಚ್ಚು ನಿಖರವಾಗಿ ಮತ್ತು ತ್ವರಿತವಾಗಿ ಪೂರ್ಣಗೊಳ್ಳುತ್ತವೆ.

