ಕಾಸರಗೋಡು: ಉಜ್ವಲ ಸರ್ಕಾರವು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದ ಮಕ್ಕಳಿಗೆ 'ಉಜ್ವಲ ಬಾಲ್ಯಂ' ಪ್ರಶಸ್ತಿಯನ್ನು ನೀಡಲಾಗುತ್ತದೆ.
ಸಾಮಾನ್ಯ ಹಾಗೂ ವಿಶೇಷ ಚೇತನ ವಿಭಾಗದಿಂದ 6ರಿಂದ 11 ವಯಸ್ಸು 12ರಿಂದ 18 ವಯಸ್ಸಿನ, 2025 ಜನವರಿ 1 ರಿಂದ 2025 ಡಿಸೆಂಬರ್ 31ರ ಅವಧಿಯಲ್ಲಿ ವಿಶೇಷ ಪ್ರತಿಭೆ ತೋರಿದ ಮಕ್ಕಳನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗುವುದು. ಕಲೆ, ಕ್ರೀಡೆ, ಸಾಹಿತ್ಯ, ವಿಜ್ಞಾನ, ಸಮಾಜ ಸೇವೆ, ಪರಿಸರ ಸಂರಕ್ಷಣೆ, ಮಾಹಿತಿ ತಂತ್ರಜ್ಞಾನ, ಕೃಷಿ, ತ್ಯಾಜ್ಯ ನಿರ್ವಹಣೆ, ಮಾನವೀಯ ಚಟುವಟಿಕೆಗಳು, ಕರಕುಶಲ ಕಲೆ, ಶಿಲ್ಪಕಲೆ ಮತ್ತು ಅಸಾಧಾರಣ ಧೈರ್ಯದಿಂದ ಮಾಡಿದ ಸಾಧನೆ ಎಂಬೀ ಕ್ಷೇತ್ರಗಳಲ್ಲಿನ ಪ್ರತಿಭೆಯನ್ನು ಆಧರಿಸಿ ಪ್ರಶಸ್ತಿ ನೀಡಲಾಗುತ್ತದೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಡಿ-ಬ್ಲಾಕ್, ಕಲೆಕ್ಟರೇಟ್, ವಿದ್ಯಾನಗರ, ಕಾಸರಗೋಡು - 671123 ಎಂಬ ವಿಳಾಸಕ್ಕೆ ಸೆಪ್ಟೆಂಬರ್ 10 ರೊಳಗೆ ಅರ್ಜಿಯನ್ನು ಕಳುಹಿಸಬೇಕು. ವೆಬ್ ಸೈಟ್ www.wcd.kerala.gov.in ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ (04994 256990) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

