HEALTH TIPS

ಮುಜುಂಗಾವು: ಸ್ವಾತಂತ್ರ್ಯ ದಿನಾಚರಣೆ ಹಾಗೂ ರಾಮಾಯಣ ಮಾಸಾಚರಣೆಯ ಸಮಾರೋಪ

ಕುಂಬಳೆ: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ರಾಮಾಯಣ ಮಾಸಾಚರಣೆಯ ಸಮಾರೋಪ ಸಮಾರಂಭ ನಡೆಯಿತು.


ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಧ್ವಜಾರೋಹಣಗೈದು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೋತ್ಸವದ ಶುಭಾಶಂಸನೆಗೈದರು. ಇಂದಿನ ಮಕ್ಕಳೇ ಮುಂದಿನ ಜನಾಂಗ. ಇಂದಿನ ಯುವ ಪೀಳಿಗೆಗಳಾದ ನೀವು ಮುಂದಿನ ವಿಕಸಿತ ಭಾರತಕ್ಕೆ ನಾಂದಿಯಾಗಬೇಕು ಎಂದು ಕರೆ ನೀಡಿದರು. 

ಬಳಿಕ ರಾಷ್ಟ್ರಗೀತೆ, ಧ್ವಜಗೀತೆ ಹಾಗೂ ಪ್ರತಿಜ್ಞೆಯೊಂದಿಗೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮುಕ್ತಾಯಗೊಂಡಿತು. ರಾಮಾಯಣ ಮಾಸಾಚರಣೆಯ ಸಮಾರೋಪದ ಅಂಗವಾಗಿ ಪುಂಡರಿಕಾಕ್ಷ ಆಚಾರ್ಯ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ  ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ರಾಮಾಯಣದ ಮೌಲ್ಯಗಳು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಮೂಲಕ ದೇಶಭಕ್ತಿ, ಏಕತೆ ಮತ್ತು ರಾಷ್ಟ್ರದ ಗೌರವವನ್ನು ಬೆಳೆಸುವ ಸಂದೇಶ ನೀಡಲಾಯಿತು. ರಾಮಾಯಣ ಮಾಸಾಚರಣೆಯ ಮೂಲಕ ಸತ್ಯ, ಧರ್ಮ, ಕರ್ತವ್ಯ ಮತ್ತು ಉತ್ತಮ ಜೀವನಮೌಲ್ಯಗಳನ್ನು ಪಾಲಿಸುವ ಪ್ರೇರಣೆ ದೊರೆಯಿತು. ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ಶಾಲಾ ಮುಖ್ಯ ಶಿಕ್ಷಕ ಶ್ಯಾಮ್ ಭಟ್ ದರ್ಬೆಮಾರ್ಗ, ಸಹ ಮುಖ್ಯ ಶಿಕ್ಷಕಿ ಚಿತ್ರಾ ಸರಸ್ವತಿ, ಅಧ್ಯಾಪಕ ವೃಂದ ಹಾಗೂ ರಕ್ಷಕರು ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries