ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿ ಕೃಷಿಭವನದ ನೇತೃವದಲ್ಲಿ ಓಣಂ ತರಕಾರಿ ಸಂತೆ ಶನಿವಾರ ಬದಿಯಡ್ಕ ಇಕೋಶಾಪ್‍ನಲ್ಲಿ ಶುಕ್ರವಾರ ಆರಂಭವಾಯಿತು. 3 ದಿನಗಳ ಕಾಲ ನಡೆಯುವ ಓಣಂ ಸಂತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಉದ್ಘಾಟಿಸಿದರು. ಓಣಂ ಎಂದರೆ ಸಮೃದ್ಧಿಯ ಸಂಕೇತ, ಹಬ್ಬದ ಸಂಭ್ರಮ. ನಮ್ಮ ಸ್ಥಳೀಯ ರೈತರು ಬೆಳೆದ ವಿಷಮುಕ್ತ, ತಾಜಾ ತರಕಾರಿಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದೊಂದಿಗೆ ಕೃಷಿಭವನದ ಮೂಲಕ ಈ ಸಂತೆ ಆರಂಭಿಸಲಾಗಿದೆ. ಮಧ್ಯವರ್ತಿಗಳ ಕಿರಿಕಿರಿಯಿಲ್ಲದೆ, ರೈತರು ತಾವು ಶ್ರಮಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತ ಹಾಗೂ ನ್ಯಾಯಯುತ ಬೆಲೆಯು ಲಭಿಸಲಿದೆ. ನಮ್ಮ ಊರಿನ ಸಾರ್ವಜನಿಕರಿಗೆ ಯಾವುದೇ ರಾಸಾಯನಿಕ ಮಿಶ್ರಣವಿಲ್ಲದ, ತಾಜಾ ಮತ್ತು ಆರೋಗ್ಯಕರ ತರಕಾರಿಗಳನ್ನು ಕೈಗೆಟುಕುವ ದರದಲ್ಲಿ ಒದಗಿಸಲಾಗುವುದು. ಕೃಷಿಭವನದ ಅಧಿಕಾರಿಗಳು ಹಾಗೂ ಇಕೋಶಾಪ್ ಸಿಬ್ಬಂದಿ ಈ ಸಂತೆಯನ್ನು ಯಶಸ್ವಿಯಾಗಿ ಆಯೋಜಿಸಲು ಶ್ರಮಿಸಿದ್ದಾರೆ. ಅವರ ಈ ಕಾರ್ಯ ಅಭಿನಂದನೀಯ ಎಂದರು.
ಕೃಷಿ ಅಧಿಕಾರಿ ಬಿಂದು ಜೋರ್ಜ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ, ಜನಪ್ರತಿನಿಧಿಗಳಾದ ಬಾಲಕೃಷ್ಣ ಶೆಟ್ಟಿ ಕೆ., ಶಾಹಿನಾ, ಶ್ಯಾಮಪ್ರಸಾದ ಸರಳಿ, ಕೃಷಿಕರು, ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಹಾಯಕ ಕೃಷಿ ಅಧಿಕಾರಿ ಮೋಹನನ್ ವಂದಿಸಿದರು.

.jpeg)
