HEALTH TIPS

ಪಾಕ್‌, ಸೌದಿ, ಟರ್ಕಿ ತ್ರಿಪಕ್ಷೀಯ ರಕ್ಷಣಾ ಒಪ್ಪಂದಕ್ಕೆ ಸಹಿ

ಇಸ್ಲಾಮಾಬಾದ್‌, ಅಂಕಾರ: ಹೆಚ್ಚುತ್ತಿರುವ ಭದ್ರತಾ ಕಾಳಜಿಯ ನಡುವೆ ಪ್ರಾದೇಶಿಕ ಶಕ್ತಿಗಳ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಪಾಕಿಸ್ತಾನ, ಸೌದಿ ಅರೇಬಿಯಾ, ಟರ್ಕಿ ದೇಶಗಳು ತ್ರಿಪಕ್ಷೀಯ ರಕ್ಷಣಾ ಒಪ್ಪಂದಕ್ಕೆ ಸಹಿಹಾಕಿವೆ. 


'ಮೂರು ರಾಷ್ಟ್ರಗಳ ಪೈಕಿ ಯಾವುದರ ಮೇಲೆ ದಾಳಿ ನಡೆದರೂ, ಮೂರೂ ದೇಶಗಳ ಮೇಲೆ ನಡೆದ ದಾಳಿ ಎಂದು ಒಪ್ಪಂದದ ಅಡಿಯಲ್ಲಿ ಪರಿಗಣಿಸಲಾಗುತ್ತದೆ' ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ತಿಳಿಸಿದೆ.

ಒಪ್ಪಂದ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್‌ ಮಾರ್ಷಲ್‌ ಅಸೀಂ ಮುನೀರ್‌ ನೇತೃತ್ವದ ಉನ್ನತ ಮಟ್ಟದ ನಿಯೋಗದ ಜೊತೆಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಗುರುವಾರವೇ ಜೆದ್ದಾ ನಗರಕ್ಕೆ ಬಂದಿಳಿದಿದ್ದರು.

ಸೌದಿ ರಾಜ ಮೊಹಮ್ಮದ್ ಬಿನ್‌ ಸಲ್ಮಾನ್‌, ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಹಾಗೂ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು 'ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದ'ಕ್ಕೆ ಇಲ್ಲಿನ ಮೆಕ್ಕಾ ನಗರದಲ್ಲಿ ಸಹಿ ಹಾಕಿದರು.

'ಮೂರೂ ದೇಶಗಳ ರಾಜತಾಂತ್ರಿಕರು ರಕ್ಷಣಾ ಸಹಕಾರ ಒಪ್ಪಂದವನ್ನು ಮತ್ತಷ್ಟು ಸುಧಾರಿಸಿದ್ದು, ಅನುಮೋದನೆ ನೀಡಬಹುದಾದ ಇತರೆ ಕ್ಷೇತ್ರಗಳನ್ನು ಸೇರ್ಪಡೆಗೊಳಿಸಿದ್ದಾರೆ' ಎಂದು ಟರ್ಕಿ ಹಾಗೂ ಪಾಕಿಸ್ತಾನದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಜಂಟಿ ರಕ್ಷಣೆಗಾಗಿ 'ಮೆಕ್ಕಾ ಅಲ್‌ ಮುಕರ್‌ಮಹ್‌ ಶೃಂಗಸಭೆ'ಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ತೈಲ ಸಮೃದ್ಧವಾಗಿರುವ ಸೌದಿ ಅರೇಬಿಯಾದೊಂದಿಗೆ ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ಪಾಕಿಸ್ತಾನ, ನ್ಯಾಟೊದ ಎರಡನೇ ಅತೀ ದೊಡ್ಡ ಸೇನೆ ಹಾಗೂ ಬೃಹತ್‌ ಪ್ರಮಾಣದಲ್ಲಿ ರಕ್ಷಣಾ ಕೈಗಾರಿಕೆ ಅಭಿವೃದ್ಧಿ ಹೊಂದುತ್ತಿರುವ ಟರ್ಕಿಯು ಈ ಒಪ್ಪಂದದ ಮೂಲಕ ಪರಸ್ಪರ ಕೈ ಜೋಡಿಸಿವೆ.

ಗಾಜಾ ಹಾಗೂ ಪ್ರಾದೇಶಿಕ ಸಂಘರ್ಷಗಳಿಗೆ ಸಂಬಂಧಿಸಿದಂತೆ ಇಸ್ರೇಲ್‌ ಹಾಗೂ ಟರ್ಕಿ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿರುವ ಬೆನ್ನಲ್ಲೇ, ಈ ಒಪ್ಪಂದ ನಡೆದಿರುವುದು ಮಹತ್ವ ಪಡೆದುಕೊಂಡಿದೆ.

'ಒಪ್ಪಂದದ ಪ್ರಕಾರ, ಉಭಯ ರಾಷ್ಟ್ರಗಳು ಜಂಟಿ ಸೇನಾ ತರಬೇತಿ, ತಂತ್ರಜ್ಞಾನ ಹಾಗೂ ಗುಪ್ತಚರ ಮಾಹಿತಿಗಳನ್ನು ಪರಸ್ಪರ ವರ್ಗಾವಣೆ ಮಾಡಿಕೊಳ್ಳಲಿವೆ' ಎಂದು ಟರ್ಕಿಯ 'ಹ್ಯಾಬರ್‌ಟರ್ಕ್‌' ಟೆಲಿವಿಷನ್‌ ವರದಿ ಮಾಡಿದೆ.

ಒಪ್ಪಂದದ ಮಹತ್ವ: ಇರಾನ್‌ ಜೊತೆಗಿನ ಯುದ್ಧದಿಂದ ಸೌದಿ ಅರೇಬಿಯಾದ ಕಚ್ಚಾತೈಲ ಮೂಲಸೌಕರ್ಯವು ಸಾಕಷ್ಟು ಹಾನಿಗೊಳಗಾಗಿದೆ. ಇದಾದ ಬಳಿಕ, ರಕ್ಷಣಾ ಪಾಲುದಾರಿಕೆಯನ್ನು ಮತ್ತಷ್ಟು ವೈವಿಧ್ಯಗೊಳಿಸುವ ಸೌದಿ ಈ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಹೇಳಲಾಗಿದೆ.

ಇದಲ್ಲದೇ ಹೆಚ್ಚುವರಿಯಾಗಿ, 'ಅಮೆರಿಕ ಹಾಗೂ ಇರಾನ್‌ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಕುರಿತು ಚರ್ಚೆ ನಡೆದಿದೆ. ವ್ಯಾಪಾರ ವೃದ್ಧಿ ಹಾಗೂ ಭದ್ರತಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿಯೂ ಸಭೆಯಲ್ಲಿ ಮಾತುಕತೆ ನಡೆದಿದೆ' ಎಂದು ಪಾಕಿಸ್ತಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 


-ಪಾಕಿಸ್ತಾನ ಟರ್ಕಿ ಜತೆಗೆ ಕಾಗದದ ಮೇಲಿನ ಒಪ್ಪಂದದಿಂದ ಭದ್ರತೆ ಸಿಗುವುದಕ್ಕೆ ಸಾಧ್ಯವಿಲ್ಲ. ಸೌದಿ ಅರೇಬಿಯಾದವರು ಇದನ್ನು ಮನಗಾಣಬೇಕು

-ಇಬ್ರಾಹಿಂ ರೆಜಾಯ್ ಇರಾನ್‌ ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿ ಸದಸ್ಯ






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries