HEALTH TIPS

ಜನ್ಮಸಿದ್ಧ ಪೌರತ್ವ ಮಿತಿಗೊಳಿಸುವ ಹೊಸ ಆದೇಶಗಳಿಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಸಹಿ

ವಾಷಿಂಗ್ಟನ್: ಜನನ ಪ್ರವಾಸೋದ್ಯಮ ಮತ್ತು ಜನ್ಮಸಿದ್ಧ ಪೌರತ್ವಕ್ಕೆ ಅರ್ಹರನ್ನು ಮಿತಿಗೊಳಿಸುವ ಎರಡು ಪ್ರಮುಖ ಕಾರ್ಯಕಾರಿ ಆದೇಶಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.

ಗುರುವಾರ ಟ್ರಂಪ್ ಸಹಿ ಮಾಡಿದ ಒಂದು ಆದೇಶವು ವಾಣಿಜ್ಯ ಜನನ ಪ್ರವಾಸೋದ್ಯಮದಲ್ಲಿ ತೊಡಗಿರುವ ಜನರನ್ನು ಗುರಿಯಾಗಿಸಿಕೊಂಡದ್ದಾಗಿದೆ. 


ಇದು ಅವರಿಗೆ ದೇಶಕ್ಕೆ ಪ್ರವೇಶನ್ನು ನಿರಾಕರಿಸುವ ಅಂಶ ಹೊಂದಿದೆ.

ಇನ್ನೊಂದು ಆದೇಶವು ಜನ್ಮಸಿದ್ಧ ಪೌರತ್ವಕ್ಕೆ ಯಾರೆಲ್ಲ ಅನರ್ಹರು ಎಂಬ ವ್ಯಾಖ್ಯಾನವನ್ನು ವಿಸ್ತರಿಸುತ್ತದೆ. ಉದಾಹರಣೆಗೆ ವಿದೇಶಿ ಸರ್ಕಾರಗಳ ಪರವಾಗಿ ಲಾಬಿ ಮಾಡುವ ವಿದೇಶಿ ನಾಗರಿಕರ ಮಕ್ಕಳು ಜನ್ಮಸಿದ್ಧ ಪೌರತ್ವಕ್ಕೆ ಅನರ್ಹರು.

ಶತಮಾನಗಳಿಂದ ಅಮೆರಿಕದಲ್ಲಿ ಜಾರಿಯಲ್ಲಿರುವ ಜನ್ಮಸಿದ್ಧ ಪೌರತ್ವ ಹಕ್ಕನ್ನು ರದ್ದುಗೊಳಿಸುವ ಉದ್ದೇಶದಿಂದ ಟ್ರಂಪ್ ಈ ಹಿಂದೆ ಹೊರಡಿಸಿದ್ದ ಕಾರ್ಯಕಾರಿ ಆದೇಶವನ್ನು ಜೂನ್ 30ರಂದು ಅಮೆರಿಕ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

ಹೊಸ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ ಬಳಿಕ ಓವಲ್ ಕಚೇರಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಟ್ರಂಪ್, ಜೂನ್ 30ರ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕಿಡಿಕಾರಿದರು. ಹೊಸ ಆದೇಶಗಳು ಕೆಲ ಹೊಂದಾಣಿಕೆಗಳಿಗೆ ಸಂಬಂಧಿಸಿದ್ದಾಗಿವೆ ಎಂದಿದ್ಧಾರೆ.

'ಜನ್ಮಸಿದ್ಧ ಪೌರತ್ವಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ದುರದೃಷ್ಟಕರ ಆದೇಶ ಬಂದಿದೆ. ಹಾಗಾಗಿ, ಈ ಹೊಸ ಆದೇಶದ ಮೂಲಕ ಕೆಲ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ' ಎಂದಿದ್ಧಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries