HEALTH TIPS

ರೀಲ್ಸ್‌ ಮಾಡುವುದರಿಂದ ಯುವ ಜನರನ್ನು ಸಂತೈಸಲು ಸಾಧ್ಯವಿಲ್ಲ: ಕಾಂಗ್ರೆಸ್

ನವದೆಹಲಿ: ಮೋದಿ ಸರ್ಕಾರದ ದೋಷಪೂರಿತ ಆರ್ಥಿಕ ಮತ್ತು ಉದ್ಯೋಗ ನೀತಿಗಳು ಇಡೀ ದೇಶದ ಉದ್ಯೋಗ ಮಾರುಕಟ್ಟೆಯನ್ನು ತೀವ್ರ ಬಿಕ್ಕಟ್ಟಿಗೆ ದೂಡಿವೆ. ಅಲ್ಲದೆ, ಯುವಕರಿಗೆ ಉದ್ಯೋಗದ ಅಗತ್ಯವಿದೆ. ಕೇವಲ ರೀಲ್ಸ್ ಮಾಡುವುದರಿಂದ ಅವರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮಂಗಳವಾರ(ಆ.4) ಆರೋಪಿಸಿದೆ. 


ಯುವಕರ ಉದ್ಯೋಗ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಬದಲು ಮೋದಿ ಸರ್ಕಾರವು ಸುಳ್ಳು ಸುದ್ದಿ ಹರಡುವ ಮತ್ತು ದಾರಿ ತಪ್ಪಿಸುವ ರಾಜಕೀಯದಲ್ಲಿ ತೊಡಗಿರುವುದು ದೇಶದ ದುರದೃಷ್ಟಕರ ಸಂಗತಿ ಎಂದು ಕಿಡಿಕಾರಿದೆ.

ಪ್ರಮುಖ ದೇಶೀಯ ಕಂಪನಿಗಳು ಈಗ ಹಿಂದೆಂದಿಗಿಂತಲೂ ಕಡಿಮೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿವೆ ಎನ್ನುವ ಮಾಧ್ಯಮ ವರದಿಯ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 'ದೇಶದ ಪ್ರಮುಖ ಪಟ್ಟಿಮಾಡಿದ ಕಂಪನಿಗಳಲ್ಲಿ ಹೊಸ ನೇಮಕಾತಿ ವೇಗ ಕಡಿಮೆಯಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಸೆನ್ಸೆಕ್ಸ್-30 ಸೂಚ್ಯಂಕದಲ್ಲಿರುವ 11 ಪ್ರಮುಖ ಕಂಪನಿಗಳ ಒಟ್ಟು ಹೊಸ ನೇಮಕಾತಿಯು 2023-24 ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2025-26 ರ ಅವಧಿಯಲ್ಲಿ ಶೇ. 27 ರಷ್ಟು ಕುಸಿದಿದೆ' ಎಂದು ಹೇಳಿದ್ದಾರೆ.

ದೇಶದ ಯುವಕರು ವಿವೇಚನಾಶೀಲರಾಗಿದ್ದಾರೆ. ಅವರನ್ನು ತೃಪ್ತಿಪಡಿಸಲು ಕೇವಲ ರೀಲ್ಸ್‌ ಮಾಡುವುದು ಸಾಲದು. ಅವರಿಗೆ ಉದ್ಯೋಗಗಳನ್ನು ಸೃಷ್ಟಿಸಬೇಕಾಗಿದೆ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದಾರೆ.

ಕಳೆದ ವರ್ಷದಲ್ಲಿ, ದೇಶದ ಅಗ್ರ 11 ಕಂಪನಿಗಳ ಪೈಕಿ 9 ಕಂಪನಿಗಳಲ್ಲಿ ಹೊಸ ಉದ್ಯೋಗಗಳಲ್ಲಿ ಶೇ. 27ರಷ್ಟು ಕಡಿತವಾಗಿರುವುದು ದೇಶವು ತೀವ್ರ ಉದ್ಯೋಗ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬುದನ್ನು ಸೂಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ನಾವು ಪದೇ ಪದೇ ಹೇಳುತ್ತಿರುವುದು ಈಗ ನಿಜವಾಗುತ್ತಿದೆ. ಮೋದಿ ಸರ್ಕಾರವು ದೇಶದ ಆರ್ಥಿಕತೆಗೆ ತೀವ್ರ ಹಾನಿ ಉಂಟುಮಾಡಿದೆ ಮತ್ತು ಇದರ ಅತ್ಯಂತ ಗಂಭೀರ ಪರಿಣಾಮ ಯುವಕರ ಮೇಲೆ ಬಿದ್ದಿದೆ ಎಂದು ಹೇಳಿದ್ದಾರೆ.

ಇದಕ್ಕೆ ಪರಿಹಾರಗಳನ್ನು ಹುಡುಕುವ ಬದಲು ಈ ಅಹಂಕಾರಿ ಸರ್ಕಾರವು ಸಮಸ್ಯೆಯ ಅಸ್ತಿತ್ವವನ್ನೇ ನಿರಾಕರಿಸುತ್ತಿದೆ. ಇದು ಕೇವಲ ಆರಂಭವಷ್ಟೇ. ಬೃಹತ್ ಕಂಪನಿಗಳೇ ಈ ಪರಿಸ್ಥಿತಿಯಲ್ಲಿದ್ದಾಗ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಲಯದ ದಯನೀಯ ಪರಿಸ್ಥಿತಿಯನ್ನು ಸುಲಭವಾಗಿ ಊಹಿಸಬಹುದು ಎಂದಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries