ಬದಿಯಡ್ಕ: ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಷಷ್ಠ ಚಾತುರ್ಮಾಸ್ಯದ ಅಂಗವಾಗಿ ಗುರುವಾರ ಸಂಜೆ ಸಾಂಸ್ಕøತಿಕ ಉತ್ಸವದ ಅಂಗವಾಗಿ ವಿದುಷಿಃ ಇಂದಿರಾ ಶರ್ಮ ಬೆಂಗಳೂರು ಅವರಿಂದ ಸಂಗೀತ ಕಚೇರಿ ನಡೆಯಿತು. ಪಕ್ಕವಾದ್ಯದಲ್ಲಿ ವಿದ್ವಾನ್.ಡಾ.ಆರ್.ರಘುರಾಮ್ ಬೆಂಗಳೂರು (ವಯಲಿನ್), ವಿದ್ವಾನ್.ಅನೂರು ಆರ್.ದತ್ತಾತ್ರೇಯ ಶರ್ಮಬೆಂಗಳೂರು(ಮೃದಂಗ)ದಲ್ಲಿ ಸಹಕರಿಸಿದರು.
ಬಳಿಕ ಶಿರಸಿಯ ನೂಪುರ ನೃತ್ಯ ಶಾಲೆಯ ವಿದುಷಿಃ ಅನುರಾಧಾ ಹೆಗಡೆ ಮತ್ತು ವಿದುಷಿಃ ಕೀರ್ತನಾ ಹೆಗಡೆ ಬಳಗದವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.
ಶುಕ್ರವಾರ ಸಂಜೆ 6 ರಿಂದ ಕಾರ್ತಿಕಶ್ಯಾಮ ಮುಂಡೋಳುಮೂಲೆ ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ವಿದ್ವಾನ್.ವೇಣುಗೋಪಾಲ ಶ್ಯಾನುಭೋಗ್(ವಯಲಿನ್), ವಿದ್ವಾನ್. ವಸಂತಕೃಷ್ಣ ಕಾಂಚನ(ಮೃದಂಗ) ಸಹಕರಿಸಿದರು. ಬಳಿಕ ಮೈಸೂರಿನ ಶ್ರೀದುರ್ಗಾ ನೃತ್ಯ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ ಸದಸ್ಯರಿಂದ ನೃತ್ಯಾರ್ಪಣಂ ಭರತನಾಟ್ಯ ಪ್ರದರ್ಶನ ನಡೆಯಿತು.
ಇಂದು ಬಡಗುತಿಟ್ಟು ಯಕ್ಷಗಾನ ಬಯಲಾಟ:
ಇಂದು ಶ್ರೀಮಠದಲ್ಲಿ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6 ರಿಂದ ಬಡಗುತಿಟ್ಟು ಕಲಾವಿದರಿಂದ ಭಕ್ತ ಚಂದ್ರಹಾಸ ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಲಿದೆ.
ಪ್ರಸನ್ನ ಭಟ್ ಬಾಳ್ಕಲ್(ಭಾಗವತರು), ಸುನಿಲ್ ಭಂಡಾರಿ ಕಡತೋಕ(ಮೃದಂಗ), ನಯನ ಕುಮಾರ ನಿಟ್ಟೂರು(ಚೆಂಡೆ)ಯಲ್ಲಿ ಹಾಗೂ ಮುಮ್ಮೇಳದಲ್ಲಿ ಚಿಟ್ಟಾಣಿ ಸುಬ್ರಹ್ಮಣ್ಯ ಹೆಗಡೆ, ವಿದ್ಯಾಧರ ರಾವ್ ಜಲವಳ್ಳಿ, ಚಿಟ್ಟಾಣಿ ಕಾರ್ತಿಕ್ ಹೆಗಡೆ, ಗುಂಡುಬಾಳ ವಿನಾಯಕ, ರವೀಂದ್ರ ದೇವಾಡಿಗ, ಕಿಂಕಿಪಾಲ ನಾಗರಾಜ ಭಟ್, ಪುರುಷೋತ್ತಮ ಸಾಗರ ಪಾತ್ರಗಳನ್ನು ನಿರ್ವಹಿಸುವರು.

.jpg)

