ತಿರುವನಂತಪುರಂ: ಓಣಂ ಸಮಯದಲ್ಲಿ ಕರ್ತವ್ಯದಲ್ಲಿರುವ ಪೋಲೀಸ್ ಅಧಿಕಾರಿಗಳಿಗೆ ನೀಡಲಾಗುತ್ತಿದ್ದ ಭತ್ಯೆಯನ್ನು ಸರ್ಕಾರ ದ್ವಿಗುಣಗೊಳಿಸಿದೆ. ಪ್ರಸ್ತುತ ಅದು 500 ರೂ.ಗಳಷ್ಟಿತ್ತು. ಈ ಬಾರಿ ಸರ್ಕಾರ ಅದನ್ನು 1,000 ರೂ.ಗಳಿಗೆ ಹೆಚ್ಚಿಸಿದೆ.
ಓಣಂ ಸಮಯದಲ್ಲಿ ಕರ್ತವ್ಯದಲ್ಲಿರುವ ರಾಜ್ಯದ ಎಲ್ಲಾ ಪೋಲೀಸ್ ಅಧಿಕಾರಿಗಳು ಪರಿಷ್ಕøತ ಭತ್ಯೆಗೆ ಅರ್ಹರಾಗಿರುತ್ತಾರೆ. ಹದಿನೈದು ವರ್ಷಗಳ ಹಿಂದೆ, ಅಂದಿನ ಯುಡಿಎಫ್ ಸರ್ಕಾರವು ಓಣಂ ಸಮಯದಲ್ಲಿ ಕರ್ತವ್ಯದಲ್ಲಿರುವ ಪೋಲೀಸ್ ಅಧಿಕಾರಿಗಳಿಗೆ 500 ರೂ.ಗಳ ಭತ್ಯೆಯನ್ನು ನೀಡತೊಡಗಿತ್ತು. ಈಗ, ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರ ಸೂಚನೆಯಂತೆ ಭತ್ಯೆಯ ಮೊತ್ತವನ್ನು ದ್ವಿಗುಣಗೊಳಿಸಲಾಗಿದೆ.

