ಕೊಚ್ಚಿ: ಸ್ವಾತಂತ್ರ್ಯೋತ್ಸವ ರಸಪ್ರಶ್ನೆ ಸ್ಪರ್ಧೆಯ ಸಾವರ್ಕರ್ ವಿವಾದದಲ್ಲಿ ಅಮಾನತು ರದ್ದುಗೊಳಿಸುವಂತೆ ಕೋರಿ ಶಿಕ್ಷಕ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ. ಕಾಸರಗೋಡಿನ ಪಳ್ಳತ್ತಡ್ಕ ಎಯುಪಿ ಶಾಲೆಯ ಶಿಕ್ಷಕ ಗುರುಪ್ರಸಾದ್ ಅರ್ಜಿ ಸಲ್ಲಿಸಿದ್ದಾರೆ.
ಅಮಾನತು ಆದೇಶವನ್ನು ರದ್ದುಗೊಳಿಸಬೇಕು ಮತ್ತು ಶಿಸ್ತು ಕ್ರಮಗಳನ್ನು ತಡೆಹಿಡಿಯಬೇಕು ಎಂದು ಬೇಡಿಕೆಯಾಗಿದೆ. ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವುದು ಅನ್ಯಾಯ. ವಿಡಿ ಸಾವರ್ಕರ್ ಅವರ ಜೈಲು ಶಿಕ್ಷೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ದಾಖಲೆಗಳನ್ನು ಹೊಂದಿದೆ. ಸಾವರ್ಕರ್ ಹೆಸರಿನಲ್ಲಿ ಅಂಚೆ ಚೀಟಿ ಇದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಆಗಸ್ಟ್ 6,ರಂದು ನಡೆದ ರಸಪ್ರಶ್ನೆಯಲ್ಲಿ, "ಬ್ರಿಟಿಷರಿಂದ ಅತಿ ಹೆಚ್ಚು ಶಿಕ್ಷೆಯನ್ನು ಪಡೆದ ಸ್ವಾತಂತ್ರ್ಯ ಹೋರಾಟಗಾರ ಯಾರು?" ಎಂಬ ಪ್ರಶ್ನೆ ನೀಡಲಾಗಿತ್ತು. ಪ್ರಶ್ನೆಗೆ ನೀಡಲಾದ ಉತ್ತರ ವಿ.ಡಿ. ಸಾವರ್ಕರ್ ಎಂದಾಗಿದೆ.
ಕುಂಬಳೆ, ಕಾಸರಗೋಡು, ಮಂಜೇಶ್ವರ ಉಪ ಜಿಲ್ಲೆಗಳ ಶಾಲೆಗಳಲ್ಲಿ ನಡೆದ ಸ್ವಾತಂತ್ರ್ಯೋತ್ಸವ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿ.ಡಿ. ಸಾವರ್ಕರ್ ಅವರನ್ನು ವೈಭವೀಕರಿಸುವ ಪ್ರಶ್ನೆಯನ್ನು ಸೇರಿಸಲಾಯಿತು ಎಂದು ವಿವಾದವಾಯಿತು. ಬಳಿಕಪ್ರಶ್ನೆ ತಯಾರಿಸಿದ ಶಿಕ್ಷಕ ಗುರುಪ್ರಸಾದ ಎಂದು ಉಲ್ಲೇಖಿಸಿ ಅವರನ್ನು ಅಮಾನತುಗೊಳಿಸಲಾಗಿತ್ತು.

