ಪಣಜಿ: ಕಿರಿಯ ಮಹಿಳಾ ಸಹೋದ್ಯೋಗಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ತೆಹೆಲ್ಕಾ ನಿಯತಕಾಲಿಕೆಯ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ತಮಗೆ ಈಗ 62 ವರ್ಷ ವಯಸ್ಸಾಗಿದ್ದು, ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನಾನೊಬ್ಬ ಸಂತ್ರಸ್ತ.
ನನಗೆ ಹೆಂಡತಿ ಇದ್ದಾಳೆ. ಹೇಳಲು ಬೇರೆ ಏನೂ ಇಲ್ಲ. ಹೆಚ್ಚೆಂದರೆ, ಮೇಲ್ಮನವಿ ಸಲ್ಲಿಸಬಹುದು. ದಯವಿಟ್ಟು ನನ್ನ ಬಗ್ಗೆ ದಯೆ ತೋರಿ. ಉಳಿದ ಸಂಗತಿಗಳನ್ನು ದಾಖಲೆ ಮೂಲಕ ತಿಳಿಸಿದ್ದೇನೆ ಎಂದು ತೀರ್ಪಿನ ನಂತರ ತೇಜ್‌ಪಾಲ್ ಪೀಠದ ಮುಂದೆ ಗೋಗರೆದರು.
ಪ್ರಕರಣವು 13 ವರ್ಷ ಹಳೆಯದ್ದಾಗಿದೆ ಎಂಬ ಅಂಶವನ್ನು ಪರಿಗಣಿಸಿ ಶಿಕ್ಷೆ ವಿಧಿಸುವಾಗ ತಮ್ಮ ಕಕ್ಷಿದಾರರಿಗೆ ದಯೆ ತೋರಿಸುವಂತೆ ತೇಜ್‌ಪಾಲ್ ಪರ ವಕೀಲ ಆಬಾದ್ ಪೊಂಡಾ ಅವರು ನ್ಯಾಯ ಪೀಠವನ್ನು ವಿನಂತಿಸಿದರು ಎಂದು ವರದಿಯಾಗಿದೆ.
ಮಾಧ್ಯಮಗಳ ಮುಂದೆ ಹೇಳಿಕೆ...
ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ತರುಣ್ ತೇಜ್‌ಪಾಲ್ ಈ ತೀರ್ಪಿನಿಂದ ನಮಗೆ ತೀವ್ರ ನಿರಾಶೆಯಾಗಿದೆ. ಪ್ರಕರಣದಲ್ಲಿರುವ ಸಾಕ್ಷ್ಯಾಧಾರಗಳನ್ನು ಸರಿಯಾಗಿ ಪರಿಶೀಲಿಸಲಾಗಿಲ್ಲ ನನ್ನ ಮೇಲಿನ ಆರೋಪ ಸುಳ್ಳು ಮತ್ತು ನಾನು ನಿರ್ದೋಷಿ ಎಂಬುದನ್ನು ಸಾಬೀತುಪಡಿಸಲು ಹತ್ತು ಪಟ್ಟು ಹೆಚ್ಚಿನ ಸಾಕ್ಷ್ಯಾಧಾರಗಳು ನಮ್ಮ ಬಳಿಯಿವೆ ಎಂದರು.
ಈ ತೀರ್ಪನ್ನು ಪ್ರಶ್ನಿಸಿ ನಾವು ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿದ್ದೇವೆ. ನಾನು ರಾಜಕೀಯ ಸಂಚಿಗೆ ಬಲಿಯಾಗಿದ್ದು, ಇದು ಸಂಪೂರ್ಣ ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ.
ತೇಜ್‌ಪಾಲ್ಈ ತೀರ್ಪನ್ನು ಪ್ರಶ್ನಿಸಿ ನಾವು ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿದ್ದೇವೆ.
ಅತ್ಯಾಚಾರ ಪ್ರಕರಣದಲ್ಲಿ ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸಿ 2021ರಲ್ಲಿ ಗೋವಾದ ಸೆಷನ್ಸ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ತಳ್ಳಿ ಹಾಕಿತ್ತು.
ನ್ಯಾಯಮೂರ್ತಿಗಳಾದ ನೀಲಾ ಗೋಖಲೆ ಮತ್ತು ಅಮಿತ್ ಜಾಮ್‌ಸಂಡೇಕರ್ ಅವರಿದ್ದ ವಿಭಾಗೀಯ ಪೀಠ ಗುರುವಾರ ಈ ತೀರ್ಪು ಪ್ರಕಟಿಸಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ಎ, 354ಬಿ ಜೊತೆಗೆ ಸೆಕ್ಷನ್ 376(2)(ಎಫ್) ಮತ್ತು 376(2)(ಕೆ) ಅಡಿಯಲ್ಲಿ ತೇಜ್‌ಪಾಲ್ ಅವರನ್ನು ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ಅಪರಾಧಗಳಲ್ಲಿ ತಪ್ಪಿತಸ್ಥ ಎಂದು ನ್ಯಾಯಾಲಯ ಹೇಳಿದೆ.

