ಪೆರ್ಲ: ಜಿಲ್ಲೆಯ ವಿವಿಧೆಡೆ ಶ್ರೀವರಮಹಾಲಕ್ಷ್ಮೀ ವ್ರತಾಚರಣೆ ಶುಕ್ರವಾರ ಜರುಗಿತು. ಪೆರ್ಲ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದ ಶ್ರೀ ಉಳ್ಳಾಲ್ತೀ ಮಹಿಳಾ ಸಂಘದ ವತಿಯಿಂದ ಹತ್ತನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ ಇಡಿಯಡ್ಕ ಕ್ಷೇತ್ರದಲ್ಲಿ ಜರುಗಿತು. ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶ್ವಹಿಂದೂ ಪರಿಷತ್‍ಮಾತೃಮಂಡಳಿ ವತಿಯಿಂದ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ನೆರವೇರಿತು.
ಸ್ವರ್ಗದ ಪಡ್ರೆ ಮಲೆತ್ತಡ್ಕ ಶ್ರೀ ಜಟಾಧಾರಿ ಮೂಲಸ್ಥಾನ ಮಾತೃ ಸಮಿತಿ ಆಶ್ರಯದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ನಡೆಯಿತು. ವರ್ಕಾಷಡಿ ಕ್ಷೇತ್ರ ಸೇರಿದಂತೆ ನಾನಾ ಕಡೆ ಶ್ರಿವರಮಹಾಲಕ್ಷ್ಮೀ ವ್ರತಾಚರಣೆ ನಡೆಯಿತು.
ಶ್ರೀನಾರಾಯಣಗುರು ಜಯಂತಿ, ವರಮಹಾಲಕ್ಷ್ಮೀ ವ್ರತಾಚರಣೆ ಹಾಗೂ ಓಣಂ ಉತ್ಸವಾಚರಣೆ ಹಿನ್ನೆಲೆಯಲ್ಲಿ ದೇವೀಕ್ಷೇತ್ರ ಒಳಗೊಂಡಂತೆ ಜಿಲ್ಲೆಯ ದೇವಾಲಯಗಳಲ್ಲಿ ಭಕ್ತಾದಿಗಳ ದಟ್ಟಣೆ ಹೆಚ್ಚಾಗಿತ್ತು.
ಪೆರ್ಲ ಸನಿಹದ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ನೆರವೇರಿತು.



