ಮಂಜೇಶ್ವರ: ವರ್ಕಾಡಿ ನರಿಂಗಾನ ಬಾವಲಿ ಗುಳಿ ಸಾರ್ವಜನಿಕ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ನಡೆಯಲಿರುವ 12ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ವರ್ಕಾಡಿ ಬ್ರಹ್ಮಶ್ರೀ ದಿನೇಶ್ ಕೃಷ್ಣ ತಂತ್ರಿ ದೀಪ ಪ್ರಜ್ವಲಿಸಿದರು. ಸಮಿತಿ ಗೌರವ ಸಲಹೆಗಾರ ದೇವಪ್ಪ ಶೆಟ್ಟಿ ಚಾವಡಿಬೈಲು ಗುತ್ತು ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಅವರು ಬೋಳದ ಸಂತ ಲಾರೆನ್ಸ್ ಇಗರ್ಜಿ ಧರ್ಮಗುರು ಪೀಟರ್ ಡಿಸೋಜಾ ಅವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು. ಸೇವಾ ಸಮಿತಿಯ ಗೌರವಾಧ್ಯಕ್ಷ ಲಕ್ಷ್ಮೀನಾರಾಯಣ ಹೊಳ್ಳ ಮರಿಕಾಪು ಬೀಡು, ಉದ್ಯಾವರ ಮಾಡ ಕ್ಷೇತ್ರದ ತಮ್ಮ ದೈವದ ದರ್ಶನ ಪಾತ್ರಿ ತಿಮಿರಿ ಬೆಳ್ಚಾಪ್ಪಡ, ಮಾಡ ಕ್ಷೇತ್ರದ ವೈದ್ಯನಾಥ ದೈವದ ದರ್ಶನ ಪಾತ್ರಿ ಮಂಜು ಬೆಳ್ಚಪ್ಪಾಡ , ಧಾರ್ಮಿಕ ನಾಯಕರಾದ ಶ್ರೀ ಕೃಷ್ಣ ಶಿವ ಕೃಪ ಕುಂಜತ್ತೂರು, ಮುಸ್ಲಿಂ ಧಾರ್ಮಿಕ ನಾಯಕರಾದ ಮಹಮ್ಮದ್ ಹಾರಿಸ್, ಶ್ರೀ ಮಹಾವೀಷ್ಣು ಕ್ಷೇತ್ರದ ಪ್ರಧಾನ ಅರ್ಚಕರಾದ ರಾಘವೇಂದ್ರ ಆಚಾರ್ಯ, ಅರಿಬೈಲು ಧೂಮಾವತಿ ದೈವದ ದರ್ಶನ ಪಾತ್ರಿ ಅರಸ ಪೂಜಾರಿ, ನರಿಂಗಾನ ಗ್ರಾಮ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ನವಾಜ್ ನರಿಂಗಾನ, ಸಮಿತಿಯ ಗೌರವ ಸಲಹೆಗಾರರಾದ ಮೋಹನ ಕಾರಂತ, ಜಗದೀಶ್ ಅಳ್ವ ಕುವೆತ್ತಬೈಲು, ಸುಂಕದಕಟ್ಟೆ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಆನಂದ ತಚ್ಚಿರೆ, ವರ್ಕಾಡಿ ಕೊಂಡೆವೂರು ದೇವಸ್ಥಾನದ ಟ್ರಸ್ಟಿನ ಅಧ್ಯಕ್ಷರಾದ ಸೋಮನಾಥ ಕಾರಂತ ಮೊದಲಾದವರು ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿ ಮುಡಿಮಾರು ಸ್ವಾಗತಿಸಿದರು. ಚಂದ್ರಹಾಸ ಸರ್ಕುಡೇಲ್ ಕರ್ಯಕ್ರಮ ನಿರೂಪಿಸಿದರು. ಸಂಚಾಲಕ ಹರೀಶ್ ಕನ್ನಿಗುಳಿ ವಂದಿಸಿದರು.



