HEALTH TIPS

"ಆಷಾಡದ ಜಾನಪದ ರಂಗಕಲೆ'-ಕಲಾವಿದರಿಗೆ ಗೌರವಾರ್ಪಣೆ

ಕಾಸರಗೋಡು: ಗಡಿನಾಡ ಕಲಾವಿದರು ಕಾಸರಗೋಡು ರಂಗ ಸಂಸ್ಥೆಯ ಆಶ್ರಯದಲ್ಲಿ "ಆಷಾಡದ ಜಾನಪದ ರಂಗಕಲೆ"ಎಂಬ ಕಾರ್ಯಕ್ರಮವು ಕೋಟೆಕಣಿಯಲ್ಲಿರುವ ಕಾರ್ಯಾಲಯದ ಸಭಾಂಗಣದಲ್ಲಿ ಜರುಗಿತು.


ಹಿರಿಯ ಪತ್ರಕರ್ತರು ಹಾಗೂ ಸಾಹಿತಿ ರಾಧಾಕೃಷ್ಣ ಕೆ ಉಳಿಯತ್ತಡ್ಕ ಸಮಾರಂಭ ಉದ್ಘಾಟಿಸಿ ಆಷಾಢ ಮಾಸದ ಮಹತ್ವ ಮತ್ತು ಜಾನಪದ ರಂಗ ಕಲೆಯ ಬಗ್ಗೆ ಉಪನ್ಯಾಸ ನೀಡಿದರು. ವರಪ್ರಸಾದ್ ಕೋಟೆಕಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ನಾಟಕ ಅಕಾಡಮಿ ಮಾಜಿ ಸದಸ್ಯ, ಸಂಸ್ಥೆಯ ಸಂಚಾಲಕ ಉಮೇಶ್ ಎಂ ಸಾಲಿಯಾನ್ ಆಷಾಡ ಮಾಸದ ವಿಶೇಷತೆಯ ಬಗ್ಗೆ ಮಾತನಾಡಿದರು. ಈ ಸಂದರ್ಭ ದೈವ ನರ್ತಕರಾದ ಸುರೇಂದ್ರನ್ ಪಣಿಕ್ಕರ್ ಮತ್ತು ಕೃಷ್ಣ ಕಲೈಪ್ಪಾಡಿ ಅವರನ್ನು ಗೌರವಿಸಲಾಯಿತು. 

ಜಯಶ್ರೀ ದಿವಾಕರ, ಪಿ ನಾರಾಯಣ ಮೂರ್ತಿ, ಪ್ರದೀಪ್ ಕುಮಾರ್ ಬೇಕಲ್, ಶ್ರೀಕಾಂತ್ ಕಾಸರಗೋಡು, ಗುರುಪ್ರಸಾದ್ ಕೋಟೆಕಣಿ, ಅಶ್ವಿನಿ ಗುರುಪ್ರಸಾದ್, ಜಾಹ್ನವಿ ಟೀಚರ್, ಶಿಲ್ಪಾ ವರಪ್ರಸಾದ್, ಗಂಗಾಧರನ್ ಎಂ ಎಂ ಮೊದಲಾದವರು ಉಪಸ್ಥಿತರಿದ್ದರು.

ಉದಯಕುಮಾರ್ ಕುಮಾರಧಾರಾ ಸ್ವಾಗತಿಸಿದರು. ಹಿರಿಯ ರಂಗ ಕಲಾವಿದರಾದ ರವೀಂದ್ರ ರೈ ಮಲ್ಲಾವರ ಕಾರ್ಯಕ್ರಮ ನಿರೂಪಿಸಿದರು. ದಿವಾಕರ ಪಿ ಅಶೋಕನಗರ ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries