ಕಾಸರಗೋಡು: ಅಡ್ಕತ್ತಬೈಲ್ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗೌರವಾರ್ಪಣೆ ಕಾರ್ಯಕ್ರಮ ಅಡ್ಕತ್ತಬೈಲ್ ಸುಬ್ರಹ್ಮಣ್ಯ ಮಂದಿರದಲ್ಲಿ ಜರುಗಿತು. ಡಾ.ಸೋಫಿಯಾಅವಿನಾಶ್ ಸಮಾರಂಭ ಉದ್ಘಾಟಿಸಿದರು. ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಸೋನಲ್ ಬಿ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ಅಬಕಾರಿ ಅಧಿಕಾರಿ ಗಣೇಶ್ ಕೆ ಹಾಗೂ ಕಂಬಾರು ಜಿಎಲ್‍ಪಿ ಶಾಲಾ ಮುಖ್ಯ ಶಿಕ್ಷಕಿ ಸುರೇಖಾ ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭ ಎಸ್ಸೆಸೆಲ್ಸಿ, ಪ್ಲಸ್‍ವನ್, ಪ್ಲಸ್‍ಟು ಹಾಗೂ ಪದವಿÀ್ತರಗತಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಎಂಬಿಬಿಎಸ್‍ನಲ್ಲಿ ಉತ್ತೀರ್ಣಳಾಗಿ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಸೇವೆಸಲ್ಲಿಸುತ್ತಿರುವ ಅಡ್ಕತ್ತಬೈಲ್ ಕೊಲ್ಲಮೆ ನಿವಾಸಿಕಮಲಾಕ್ಷ-ಚೇತನಾ ದಂಪತಿ ಪುತ್ರಿ ಡಾ. ರಕ್ಷಿತಾ ಕೆ, ಕಂಬಾರು ಜಿಎಲ್‍ಪಿ ಶಾಲಾ ಮುಖ್ಯ ಶಿಕ್ಷಕಿ ಸುರೇಖಾ ಕೆ ಹಾಗೂ ಸಿವಿಲ್ ಅಬಕಾರಿ ಅಧಿಕಾರಿ ಗಣೇಶ್ ಕೆ ಅವರನ್ನು ಗೌರವಿಸಲಾಯಿತು. ಜಿತೇಶ್ ನಾಯ್ಕ್ ಸ್ವಾಗತಿಸಿದರು. ವಿನಿಲ್ ಕುಮಾರ್ ವಂದಿಸಿದರು.



