HEALTH TIPS

ಪೋಷಾಕು ಬಣ್ಣ ವಿವಾದ: ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಗಡುವು ಪಾಲಿಸದ ಡಿ.ಜಿ

ನವದೆಹಲಿ: ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ಹಾಕಿ ತಂಡದ ಆಟಗಾರರ ಪೋಷಾಕಿನ ಬಣ್ಣ ಬದಲಾವಣೆ ವಿವಾದ ಈಗ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ.


ಪೋಷಾಕು ಬಣ್ಣ ಬದಲಾವಣೆಯ ಕುರಿತು ವಿವರ ನೀಡಬೇಕು ಎಂದು ಹಾಕಿ ಇಂಡಿಯಾದ ಅಧ್ಯಕ್ಷ ದಿಲೀಪ್ ಟಿರ್ಕಿ ಅವರು ಗಡುವು ಹಾಕಿದ್ದರು.

ಆದರೆ ಈ ಅವಧಿಯಲ್ಲಿ ಮಹಾಪ್ರಧಾನ ನಿರ್ದೇಶಕ ಕಮಾಂಡರ್ ಆರ್.ಕೆ. ಶ್ರೀವಾಸ್ತವ್ ಅವರು ಟಿರ್ಕಿ ಅವರನ್ನು ಭೇಟಿಯಾಗಿಲ್ಲ. ಈ ನಡುವೆ ಕಾರ್ಯಕಾರಿ ಮಂಡಳಿಯ ತುರ್ತುಸಭೆಯನ್ನು ಮಹಾಪ್ರಧಾನ ಕಾರ್ಯದರ್ಶಿ ಭೋಲಾನಾಥ್ ಸಿಂಗ್ ಅವರು ಕರೆದಿದ್ದಾರೆ.

ಮಂಗಳವಾರ ಸಂಜೆ 5ಗಂಟೆ ಯೊಳಗೆ ಪೋಷಾಕು ಬಣ್ಣ ಬದಲಾವಣೆಯ ಕುರಿತ ಎಲ್ಲ ದಾಖಲೆಗಳನ್ನು ತಮಗೆ ಸಲ್ಲಿಸಬೇಕು ಎಂದು ದಿಲೀಪ್ ಟಿರ್ಕಿ ಅವರು ಶ್ರೀವಾಸ್ತವ್ ಅವರಿಗೆ ಇಮೇಲ್ ಮಾಡಿದ್ದರು.

'ಕಮಾಂಡರ್ ಶ್ರೀವಾಸ್ತವ್ ಅವರು ಕಾರ್ಯಕಾರಿ ಮಂಡಳಿಗೆ ಸ್ಪಷ್ಟೀಕರಣ ನೀಡಿದ್ದಾರೆ. ಆದ್ದರಿಂದ ಅವರು ತಮ್ಮ ಸ್ಪಷ್ಟನೆಗಳಿಗೆ ಪೂರಕವಾದ ಸಾಕ್ಷ್ಯಾಧಾರ ಗಳನ್ನು ಸಲ್ಲಿಸುವುದು ಕಡ್ಡಾಯವಾಗು ತ್ತದೆ. ಆದ್ದರಿಂದ ಕೊಟ್ಟ ಗಡುವಿನೊಳಗೆ ಅವರು ದಾಖಲೆ ಸಲ್ಲಿಸಬೇಕಿತ್ತು' ಎಂದು ದಿಲೀಪ್ ಹೇಳಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries