ನವದೆಹಲಿ: ಶೇ 20ರಷ್ಟು ಎಥನಾಲ್ (ಇ20) ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾಹನಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ಬರೆದಿದ್ದ ಪತ್ರವನ್ನು ಹಿಂಪಡೆದಿದೆ.
ಉದ್ಯಮದ ಸಂಸ್ಥೆಗಳು, ತೈಲೋತ್ಪನ್ನ ಮಾರಾಟ ಕಂಪನಿಗಳು, ವಾಹನ ಪರೀಕ್ಷಾ ಏಜೆನ್ಸಿಗಳು ಸೇರಿದಂತೆ ಇತರರ ನಡುವೆ ಮಾತುಕತೆ ನಡೆದಿದೆ. ಈ ಪೈಕಿ ಹಲವರು ಸಮಗ್ರ ಸಮಾಲೋಚನೆ ಅಗತ್ಯ ಇದೆ ಎಂದಿದ್ದಾರೆ. ಹೀಗಾಗಿ ಪತ್ರವನ್ನು ಹಿಂಪಡೆಯಲಾಗಿದೆ ಎಂದು ಹೇಳಿದೆ.
ಇ20 ಇಂಧನ ಬಳಸಿದ ವಾಹನಗಳಲ್ಲಿ ಹೆಚ್ಚಿನ ಪ್ರಮಾಣದ ಕ್ಲೋರೈಡ್ ಅಂಶ ಪತ್ತೆ ಆಗಿದ್ದು, ಇದರಿಂದ ಎಂಜಿನ್‌ಗಳ ಭಾಗಗಳಿಗೆ ತೊಂದರೆ ಆಗುತ್ತದೆ ಎಂದು ಒಕ್ಕೂಟವು ಪತ್ತೆ ಹಚ್ಚಿತ್ತು.
ಅಲ್ಲದೆ, ಈ ಇಂಧನದಲ್ಲಿ ಅಧಿಕ ತೇವಾಂಶ ಪತ್ತೆ ಆಗಿರುವುದಾಗಿ ಹೇಳಿದ್ದಾರೆ. ಶೇ 1ಕ್ಕೂ ಹೆಚ್ಚು ತೇವಾಂಶ ಇದ್ದಿದರೆ, ಇಂಧನ ಮತ್ತು ಇಂಧನವನ್ನು ಭರ್ತಿ ಮಾಡಿದ ಬಳಿಕ ವಾಹನವು ತಕ್ಷಣವಾಗಿ ಇಂಧವನ್ನು ಪ್ರತ್ಯೇಕ ಮಾಡಲಾಗುವುದು.

