ಮಂಜೇಶ್ವರ: ವರ್ಕಾಡಿ ಮುಡಿಮಾರು ಶ್ರೀ ಮಲರಾಯ ಗುಳಿಗ ದೈವಸ್ಥಾನದ ವಠಾರದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಹಿರಿಯರು ಹಾಗೂ ಮಲರಾಯ ದೈವದ ಅರ್ಚಕರಾದ ಚಂದ್ರಹಾಸ ಪೂಜಾರಿ ಧ್ವಜಾರೋಹಣ ನಡೆಸಿದರು. ಮುಡಿಮಾರ್ ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಇದರ ಅಧ್ಯಕ್ಷ ಚಂದ್ರಹಾಸ ಕೆದುಂಬಾಡಿ, ರವಿ ಮುಡಿಮಾರ್ , ಮಾಧವ ಪೂಜಾರಿ ಕುದುಕೋರಿ, ನವೀನ್ ಮುಡಿ ಮಾರು, ಉಮೇಶ ಮುಡಿ ಮಾರು, ಮೊದಲಾದವರು ಉಪಸ್ಥಿತರಿದ್ದರು,
ಐಟೆಕ್ ಸಂಸ್ಥೆ:
ಕುಂಬಳೆಯ ಐಟೆಕ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ವತಿಯಿಂದ ನಡೆದ ಸಮಾರಂಭದಲ್ಲಿ ಕುಂಬಳೆ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ಭಟ್ ಕುಂಬಳೆ ಧ್ವಜಾರೋಹಣ ನಡೆಸಿದರು. ಕುಂಬಳೆ ಮಹಮ್ಮಾಯ ಟ್ರೇಡರ್ಸ್ ಮಾಲಿಕ ಸಂದೇಶ ಭಟ್ ಕುಂಬಳೆ, ಮಾಸ್ಟರ್ ಬುಕ್ ಹೌಸಿನ ಜಯಪ್ರಕಾಶ್, ವೈದ್ಯರಾದ ಗಣೇಶ್ ಕುಂಬಳೆ, ಇನ್‍ಸ್ಟಿಟ್ಯೂಟ್ ಪ್ರಾಂಶುಪಾಲ ರವಿ ಮುಡಿಮಾರು ಉಪಸ್ಥಿತರಿದ್ದರು.


