ಕಾಸರಗೋಡು: ಶ್ರೀ ನಾರಾಯಣ ಧರ್ಮ ಪರಿಪಾಲನಂ(ಎಸ್.ಎನ್.ಡಿ.ಪಿ.) ಯೋಗಂ ಕಾಸರಗೋಡು ಕೂಡ್ಲು ಶಾಖೆಯ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜಯಂತ್ಯುತ್ಸವವನ್ನು ಕೂಡ್ಲು ಗೋಪಾಲಕೃಷ್ಣ ಶಾಲಾ ವಠಾರದಲ್ಲಿ ಆಚರಿಸಲಾಯಿತು.
ಶ್ರೀ ಭಗವತಿ ಸೇವಾ ಸಂಘದ ಅಧ್ಯಕ್ಷ ಎನ್.ಸತೀಶನ್ ಸಮಾರಂಭ ಉದ್ಘಾಟಿಸಿದರು. ಎಸ್‍ಎನ್‍ಡಿಪಿ ಕಾಸರಗೋಡು ಒಕ್ಕೂಟದ ಕಾರ್ಯದರ್ಶಿ ಗಣೇಶ್ ಪಾರಕಟ್ಟ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ. ಭಾನುಪ್ರಕಾಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಎಸ್‍ಎನ್‍ಡಿಪಿ ಯೋಗಂ ನಿರ್ದೇಶಕ, ವಕೀಲ ಪಿ.ಕೆ. ವಿಜಯನ್, ಭಗವತಿ ಸೇವಾ ಸಂಘದ ಮಾಜಿ ಅಧ್ಯಕ್ಷ ಕೃಷ್ಣನ್ ಕೂಡ್ಲು, ಯೂನಿಯನ್ ಪಂಚಾಯಿತಿ ಸಮಿತಿ ಸದಸ್ಯ ಮೋಹನನ್ ಮೀಪುಗುರಿ, ಭಗವತಿ ಸೇವಾ ಸಂಘದ ಕೂಡ್ಲು ಗ್ರಾಮ ಸಮಿತಿ ಕಾರ್ಯದರ್ಶಿ ಅನಿಲ್.ಕುಮಾರ್ ಮತ್ತು ಭಗವತಿ ಸೇವಾ ಸಂಘ ಮಹಿಳಾ ಸಂಘದ ಅಧ್ಯಕ್ಷೆ ಶೈಲಜಾ ರಾಜಗೋಪಾಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ತರಗತಿಗಳಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್‍ಎನ್‍ಡಿಪಿ ಕೂಡ್ಲು ಶಾಖೆಯ ಕಾರ್ಯದರ್ಶಿ ವಿಜಯನ್ ಮನ್ನಿಪ್ಪಾಡಿ ಸ್ವಾಗತಿಸಿದರು. ಕುಮಾರಿ ಆಶಿತಾ ಅಜಿತ್ ಟೀಚರ್ ವಂದಿಸಿದರು.

