HEALTH TIPS

ನೇಪಾಳ ದುರಂತ: ಹಿಮಾಲಯದ ನೀರ್ಗಲ್ಲುಗಳ ಮೇಲೆ ಭಾರತದಿಂದ ತೀವ್ರ ನಿಗಾ

ನವದೆಹಲಿ: ಚೀನಾ ಹಾಗೂ ನೇಪಾಳದ ಗಡಿಗೆ ಹೊಂದಿಕೊಂಡಿರುವ ಹಿಮಾಲಯ ವಲಯದಲ್ಲಿ ಭಾರತ ನಿಗಾ ತೀವ್ರಗೊಳಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.


ನೇಪಾಳದಲ್ಲಿ ನೀರ್ಗಲ್ಲು ಕುಸಿದು ಸಂಭವಿಸಿದ ಭೀಕರ ಕೆಸರಿನ ಪ್ರವಾಹದ ಬೆನ್ನಲ್ಲೇ ಭಾರತ ಈ ನಿರ್ಧಾರ ತಾಳಿದೆ.

'ನೇಪಾಳದೊಂದಿಗೆ ನಾವು ಗಡಿ ಹಂಚಿಕೊಳ್ಳುತ್ತಿದ್ದು, ನಮ್ಮಲ್ಲೂ ಅದೇ ತೆರನಾದ ಭೌಗೋಳಿಕ ಪರಿಸ್ಥಿತಿ ಇದೆ. ಹಿಮಾಲಯ ವಲಯದಲ್ಲಿ ಇರುವ ಎಲ್ಲ ನೀರ್ಗಲ್ಲು ಹಾಗೂ ಹಿಮನದಿಯ ಬಗ್ಗೆ ಮೇಲ್ವಿಚಾರಣೆ ನಡೆಸಲು ನಾವು ಸೂಚಿಸಿದ್ದೇವೆ' ಎಂದು ಉತ್ತರಾಖಂಡದ ವಿಪತ್ತು ನಿರ್ವಹಣಾ ಸಚಿವ ಮದನ್ ಕೌಶಿಕ್ ಹೇಳಿದ್ದಾರೆ.

'ನಾವು ನಮ್ಮ ತಂಡಗಳಿಗೆ ನಿಗಾ ವಹಿಸುವಂತೆ ಸೂಚಿಸಿದ್ದೇವೆ. ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಬಗ್ಗೆ ಗಮನ ವಹಿಸಲು ತಿಳಿಸಿದ್ದೇವೆ' ಎಂದು ಅವರು ಹೇಳಿದ್ದಾರೆ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ನೇಪಾಳ ದುರಂತ: ಹಿಮಾಲಯದ ನೀರ್ಗಲ್ಲುಗಳ ಬಗ್ಗೆ ಭಾರತದಿಂದ ತೀವ್ರ ನಿಗಾ

ಒಂದು ಸಾಲಿನಲ್ಲಿನೇಪಾಳದ ಹಿಮನದಿ ಕುಸಿತದ ದುರಂತದ ಹಿನ್ನೆಲೆಯಲ್ಲಿ, ಹಿಮಾಲಯ ವಲಯದಲ್ಲಿನ ಭೌಗೋಳಿಕ ಅಪಾಯಗಳ ಕುರಿತು ಭಾರತವು ತೀವ್ರ ನಿಗಾ ವಹಿಸಿದೆ.

ಪ್ರಮುಖ ಪ್ರಶ್ನೋತ್ತರ


ನೇಪಾಳದ ದುರಂತದ ನಂತರ ಭಾರತ ಕೈಗೊಂಡ ಕ್ರಮವೇನು?

ನೇಪಾಳದಲ್ಲಿ ಸಂಭವಿಸಿದ ಭೀಕರ ನೀರ್ಗಲ್ಲು ಕುಸಿತ ಮತ್ತು ಕೆಸರಿನ ಪ್ರವಾಹದ ನಂತರ, ಹಿಮಾಲಯ ವಲಯದಲ್ಲಿರುವ ಎಲ್ಲ ನೀರ್ಗಲ್ಲು ಹಾಗೂ ಹಿಮನದಿಗಳ ಮೇಲೆ ನಿಗಾ ವಹಿಸಲು ಭಾರತ ಸರ್ಕಾರ ತನ್ನ ತಂಡಗಳಿಗೆ ಸೂಚನೆ ನೀಡಿದೆ.


ಉತ್ತರಾಖಂಡ ಸರ್ಕಾರ ಈ ಬಗ್ಗೆ ಯಾವ ಎಚ್ಚರಿಕೆ ನೀಡಿದೆ?

ಉತ್ತರಾಖಂಡವು ಭೌಗೋಳಿಕವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ರಾಜ್ಯದಲ್ಲಿ ಇಂತಹ ದುರಂತಗಳು ಸಂಭವಿಸುವ ಸಾಧ್ಯತೆಗಳ ಬಗ್ಗೆ ಗಮನ ಹರಿಸಲು ಮತ್ತು ಸನ್ನದ್ಧವಾಗಿರಲು ವಿಪತ್ತು ನಿರ್ವಹಣಾ ಸಚಿವರು ತಂಡಗಳಿಗೆ ಸೂಚಿಸಿದ್ದಾರೆ.


ಹಿಮಾಲಯದ ನೀರ್ಗಲ್ಲುಗಳು ಏಕೆ ಕರಗುತ್ತಿವೆ?

ತಾಪಮಾನ ಏರಿಕೆಯಿಂದಾಗಿ ಹಿಮಾಲಯದ ನೀರ್ಗಲ್ಲುಗಳು ವೇಗವಾಗಿ ಕರಗುತ್ತಿವೆ. ಇದು ಭೀಕರ ಪ್ರವಾಹ ಮತ್ತು ದುರಂತಗಳಿಗೆ ಮುಖ್ಯ ಕಾರಣವಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.


ಹಿಮನದಿ ಕರಗುವಿಕೆಯಿಂದ ಉಂಟಾಗುವ ಅಪಾಯಗಳೇನು?

ನೀರ್ಗಲ್ಲುಗಳು ಮತ್ತು ಪೆರ್ಮಫಾಸ್ಟ್ (ಹೆಪ್ಪುಗಟ್ಟಿದ ನೆಲ) ಕರಗುವುದರಿಂದ ಪರ್ವತದ ಇಳಿಜಾರುಗಳು ಅಸ್ಥಿರಗೊಂಡು, ಭೂಕುಸಿತಗಳು ಉಂಟಾಗುವ ಗಂಭೀರ ಅಪಾಯವಿದೆ.


ದುರಂತಗಳ ತೀವ್ರತೆ ಹೆಚ್ಚಾಗಲು ಕಾರಣಗಳೇನು?

ಹವಾಮಾನ ಬದಲಾವಣೆಯ ಜೊತೆಗೆ ಯೋಜನಾ ರಹಿತ ಅಭಿವೃದ್ಧಿ ಕಾರ್ಯಗಳು ಹಿಮಾಲಯ ವಲಯದಲ್ಲಿ ಸಂಭವಿಸುವ ದುರಂತಗಳ ಆವರ್ತನ, ತೀವ್ರತೆ ಮತ್ತು ಪರಿಣಾಮವನ್ನು ಹೆಚ್ಚಿಸುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖ ಅಂಕಿಅಂಶಗಳು

1,266ಉತ್ತರಾಖಂಡದಲ್ಲಿರುವ ಹಿಮನದಿಗಳ ಸಂಖ್ಯೆ2 ಬಿಲಿಯನ್ಹಿಮಾಲಯದ ನೀರು ಅವಲಂಬಿತ ಜನಸಂಖ್ಯೆ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಉತ್ತರಾಖಂಡವು ದೇಶದಲ್ಲಿ ಭೌಗೋಳಿಕವಾಗಿ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿದ್ದು, ಸರ್ಕಾರದ ಮಾಹಿತಿ ಪ್ರಕಾರ ರಾಜ್ಯದಲ್ಲಿ 1,266 ಹಿಮ ನದಿಗಳಿವೆ.

ಸುಮಾರು ಎರಡು ಬಿಲಿಯನ್ ಜನರಿಗೆ ನೀರಿನ ಮೂಲವಾಗಿರುವ ಹಿಮಾಲಯದ ನೀರ್ಗಲ್ಲುಗಳು, ತಾಪಮಾನ ಏರಿಕೆಯಿಂದಾಗಿ ವೇಗವಾಗಿ ಕರಗುತ್ತಿವೆ. ಪರಿಣಾಮ ಭೀಕರ ದುರಂತಗಳು ಸಂಭವಿಸುತ್ತಿವೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ನೀರ್ಗಲ್ಲು ಹಾಗೂ ಪೆರ್ಮಫಾಸ್ಟ್ (ಹೆಪ್ಪುಗಟ್ಟಿದ ನೆಲ) ಕರಗುವುದರಿಂದ ಪರ್ವತಗಳ ಇಳಿಜಾರು ಅಸ್ಥಿರಗೊಂಡು, ಭೂಕುಸಿತ ಉಂಟಾಗುವ ಸಾಧ್ಯತೆ ಇದೆ.

ಹವಾಮಾನ ಬದಲಾವಣೆ ಜೊತೆಗೆ ಯೋಜನಾ ರಹಿತ ಅಭಿವೃದ್ಧಿಯು ದುರಂತಗಳ ಆವರ್ತನ, ತೀವ್ರತೆ ಹಾಗೂ ಪರಿಣಾಮವನ್ನು ಹೆಚ್ಚಿಸಿದೆ ಎಂದು ತಜ್ಞರು ಹೇಳಿದ್ದಾರೆ.

ಆಧಾರ: ಎಎಫ್‌ಪಿ ಹಾಗೂ ರಾಯಿಟರ್ಸ್







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries