ರಾಜೌರಿ/ಜಮ್ಮು: ಗಡಿ ಪ್ರದೇಶದಲ್ಲಿ ಶಂಕಿತ ಪಾಕಿಸ್ತಾನಿ ಡ್ರೋನ್‌ಗಳು ಗೋಚರಿಸಿದ ಕಾರಣ ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನಿಯಂತ್ರಣ ಗಡಿಯ (ಎಲ್‌ಒಸಿ) ಉದ್ದಕ್ಕೂ ಶೋಧ ಕಾರ್ಯಾಚರಣೆ ಪ್ರಾರಂಭಿಸಿವೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.
ಗುರುವಾರ ಮಧ್ಯರಾತ್ರಿ ನೌಶೇರಾ ಸೆಕ್ಟರ್‌ನ ರುಮ್ಲಿಧಾರಾ ಪ್ರದೇಶದ ಎಲ್‌ಒಸಿ ಉದ್ದಕ್ಕೂ ಹಾರಾಟ ನಡೆಸುತ್ತಿದ್ದ ಡ್ರೋನ್‌ಗಳನ್ನು ಪಡೆಗಳು ಗುಂಡು ಹಾರಿಸಿ ಹಿಮ್ಮೆಟ್ಟಿಸಿದವು ಎಂದು ಮೂಲಗಳು ತಿಳಿಸಿವೆ.
ನೌಶೇರಾ ಸೆಕ್ಟರ್‌ನ ಎಲ್‌ಒಸಿಯಲ್ಲಿ ಶಂಕಿತ ನುಸುಳುಕೋರನ ಚಲನವಲನದ ಬಗ್ಗೆ ದೃಢೀಕೃತವಲ್ಲದ ವರದಿಗಳಿದ್ದು, ಭದ್ರತಾ ಪಡೆಗಳು ಶುಕ್ರವಾರ ಆ ಪ್ರದೇಶದಲ್ಲಿ ಶೋಧ ಕಾರ್ಯಾಚಾರಣೆ ಪ್ರಾರಂಭಿಸಿವೆ ಎಂದು ಅವರು ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ರಾಜೌರಿ ಮತ್ತು ಸಾಂಬಾ ಜಿಲ್ಲೆಯಲ್ಲಿ ಶಂಕಿತ ಡ್ರೋನ್ ಚಟುವಟಿಕೆಗಳು ವರದಿಯಾಗಿದ್ದವು.

