ಕೋಝಿಕೋಡ್: ಸಂಪ್ರದಾಯ, ಏಕತೆ ಮತ್ತು ಸಹ ಜೀವಿಗಳ ಮೇಲಿನ ಪ್ರೀತಿಯ ಸಂದೇಶವನ್ನು ನೀಡುವ ಮೂಲಕ ದಿ ವೈಟ್ ಸ್ಕೂಲ್ ಇಂಟನ್ರ್ಯಾಷನಲ್ ನಲ್ಲಿ ಭವ್ಯವಾದ ಓಣಂ ಆಚರಣೆಯನ್ನು ಆಯೋಜಿಸಲಾಯಿತು.
ಆಚರಣೆಗಳ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ಎತ್ತಿಹಿಡಿಯುವ ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ವರ್ಷದ ಓಣಂ ಅನ್ನು ಸ್ಮರಣೀಯವಾಗಿಸಿದರು.
ಶಾಲೆಯ ಟೆನಿಸ್ ಕೋರ್ಟ್ ನಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಹೂವುಗಳ ಬದಲಿಗೆ ವಿವಿಧ ಬಣ್ಣಗಳು ಮತ್ತು ಆಕಾರಗಳ ತರಕಾರಿಗಳಿಂದ ಮಾಡಲ್ಪಟ್ಟ 10 ಮೀಟರ್ ವ್ಯಾಸದ ಬೃಹತ್ 'ತರಕಾರಿಯ ಪೂಕಳಂ' ಮುಖ್ಯ ಆಕರ್ಷಣೆಯಾಗಿತ್ತು.
ಓಣಂ ಆಚರಣೆಯ ಆರಂಭದಿಂದಲೂ, ದಿ ವೈಟ್ ಸ್ಕೂಲ್ ಹೂವಿನ ಪೂಕಳಂ ರಚಿಸಲು ಹೂವುಗಳ ಬದಲಿಗೆ ತರಕಾರಿಗಳನ್ನು ಬಳಸುವ ಅನುಕರಣೀಯ ಅಭ್ಯಾಸವನ್ನು ಅನುಸರಿಸುತ್ತಿದೆ.
ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ತಂದ ತರಕಾರಿಗಳನ್ನು ಮೆಗಾ ಪೂಕಳಂಗೆ ಬಳಸಲಾಗುತ್ತಿತ್ತು. ಅಗತ್ಯವಿರುವವರಿಗೆ ಆಹಾರವನ್ನು ವ್ಯರ್ಥ ಮಾಡದೆ ಒದಗಿಸುವ ಕಲ್ಪನೆಯನ್ನು ಇದರ ಮೂಲಕ ಪ್ರಚಾರ ಮಾಡಲಾಗುತ್ತಿದೆ.
ಪೂಕಳಂ ಬಳಿಕ, ಈ ತರಕಾರಿಗಳನ್ನು ಶಾಲೆಯ ಸಹಾಯಕ ಸಿಬ್ಬಂದಿ ಮತ್ತು ಪ್ರದೇಶದ ಬಡ ಕುಟುಂಬಗಳಿಗೆ ವಿತರಿಸಲಾಗುತ್ತದೆ.
ಆಚರಣೆಯ ಭಾಗವಾಗಿ ವಿದ್ಯಾರ್ಥಿಗಳು ವಿವಿಧ ಕಲೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ತಿರುವಾದಿರ, ಓಣಂ ಹಾಡುಗಳು, ಇತರ ನೃತ್ಯಗಳು ಮತ್ತು ಓಣಂ ಸದ್ಯದಂತಹ ಕಾರ್ಯಕ್ರಮಗಳನ್ನು ಆಚರಣೆ ಭಾಗವಾಗಿ ಮೆರುಗು ನೀಡಿತು.
ಶೈಕ್ಷಣಿಕ ಉಪಕ್ರಮಗಳ ನಿರ್ದೇಶಕಿ ಮತ್ತು ಶಾಲೆಗಳ ಮುಖ್ಯಸ್ಥೆ ಡಾ. ಪದ್ಮಾ ಹರಿಹರನ್, ಈ ವಿಶಿಷ್ಟ ಆಚರಣೆಯನ್ನು ಕೇವಲ ಅಧ್ಯಯನವನ್ನು ಮೀರಿ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ತುಂಬುವ ಉದ್ದೇಶದಿಂದ ಆಯೋಜಿಸಲಾಗಿದೆ ಎಂದು ಹೇಳಿದರು.

