ಮಂಜೇಶ್ವರ: ವರ್ಕಾಡಿ ಕಾವೀಃ ಸುಬ್ರಹ್ಮಣ್ಯ ದೇವಾಲಯದಲ್ಲಿ ಸಾಂಪ್ರದಾಯಿಕ ಶ್ರದ್ಧಾ ಭಕ್ತಿಗಳೊಂದಿಗೆ ಸೋಮವಾರ ನಾಗರ ಪಂಚಮಿ ಉತ್ಸವ ನಡೆಯಿತು. ಮುಂಜಾನೆಯಿಂದಲೇ ಭಕ್ತರು ತನು ಅರ್ಪಿಸಲು ತಂಡೋಪತಂಡವಾಗಿ ಆಗಮಿಸಿದ್ದರು. ವಿವಿಧ ವಿಧಿವಿಧಾನಗಳು ನಡೆಯಿತು.
ಪ್ರಧಾನ ಅರ್ಚಕ ವಾಸುದೇವ ಮಯ್ಯ ವಿಧಿವಿಧಾನಗಳನ್ನು ನೆರವೇರಿಸಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಸುಭಾಶ್ ಅಡಪ ಕಲ್ಲೂರು ಬೀಡು ನೇತೃತ್ವ ವಹಿಸಿದ್ದರು.

.jpg)
