HEALTH TIPS

ಭಾರತ ಮೂಲದ ಬಾಲಕನನ್ನು ರಕ್ಷಿಸಿದ ಲೈಫ್‌ಗಾರ್ಡ್‌ಗೆ ಡೊನಾಲ್ಡ್ ಟ್ರಂಪ್ ಸನ್ಮಾನ

ವಾಷಿಂಗ್ಟನ್: ಕಳೆದ ತಿಂಗಳು ಕ್ಯಾಲಿಫೋರ್ನಿಯಾದ ಕಡಲತೀರವೊಂದರಲ್ಲಿ ಕೊಚ್ಚಿಹೋಗುತ್ತಿದ್ದ ಭಾರತೀಯ ಮೂಲದ 10 ವರ್ಷದ ಬಾಲಕನನ್ನು ರಕ್ಷಿಸಿದ 16 ವರ್ಷದ ಲೈಫ್‌ಗಾರ್ಡ್ (ಜೀವ ರಕ್ಷಕ) ಅನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸನ್ಮಾನಿಸಿದ್ದಾರೆ. 


ಲೈಫ್‌ಗಾರ್ಡ್ ರೈಡರ್ ವಿಲಿಯಮ್ಸ್ ಮತ್ತು ಅವರ ಕುಟುಂಬ ಸದಸ್ಯರು ಹಾಗೂ ರಕ್ಷಿಸಲ್ಪಟ್ಟ ಬಾಲಕ ನಥಾನಿಯಲ್ ರಾಯ್, ಆತನ ಸಹೋದರಿ ಲೈಲಾ ಮತ್ತು ತಂದೆ ಸುಮಿತ್ ರಾಯ್ ಅವರನ್ನು ಶ್ವೇತಭವನದ ಓವಲ್ ಕಚೇರಿಗೆ ಕರೆಸಿದ್ದರು.

ಈ ಸಂದರ್ಭ ವಿಲಿಯಮ್ಸ್ ಮತ್ತು ಕುಟುಂಬ ವರ್ಗವನ್ನು ಸನ್ಮಾನಿಸಲಾಯಿತು.

'ಕಠಿಣ ಸನ್ನಿವೇಶವೊಂದನ್ನು ಯಶಸ್ವಿಯಾಗಿ ಎದುರಿಸಿ ಬಂದಿದ್ದಕ್ಕಾಗಿ ನಾನು ನಥಾನಿಯಲ್ ರಾಯ್ ಅವರನ್ನು ಅಭಿನಂದಿಸಲು ಬಯಸುತ್ತೇನೆ. ಇದರರ್ಥ, ಜೀವನದಲ್ಲಿ ನಿಮಗೆ ಒಳ್ಳೆಯ ಅದೃಷ್ಟ ಒದಗಿಬರಲಿದೆ' ಎಂದು ಟ್ರಂಪ್ ಹೇಳಿದ್ದಾರೆ.

ವಿಲಿಯಮ್ಸ್ ನಡೆಸಿದ ಸಾಹಸಮಯ ರಕ್ಷಣಾ ಕಾರ್ಯವನ್ನು ಶ್ಲಾಘಿಸಿದ್ದ ಟ್ರಂಪ್, ನಿನ್ನ ಅದೃಷ್ಟ ಚೆನ್ನಾಗಿತ್ತು ಎಂದು ನಥಾನಿಯಲ್‌ಗೆ ಹೇಳಿದ್ದಾರೆ.

ಜುಲೈ 25 ರಂದು ಕ್ಯಾಲಿಫೋರ್ನಿಯಾದ ಸಾಂಟಾ ಕ್ರೂಜ್‌ನಲ್ಲಿರುವ ಸೀಬ್ರೈಟ್ ಬೀಚ್‌ನಲ್ಲಿ ಪ್ರಬಲ ಅಲೆಗಳ ಸೆಳೆತಕ್ಕೆ ಸಿಲುಕಿದ್ದ ನಥಾನಿಯಲ್ ಅವರನ್ನು ವಿಲಿಯಮ್ಸ್ ರಕ್ಷಿಸಿದ್ದರು.

ತಮ್ಮ ಪಕ್ಕದ ಆಸನದಲ್ಲಿ ಕುಳಿತಿದ್ದ ವಿಲಿಯಮ್ಸ್ ಅವರನ್ನು ಕುರಿತು, 'ನೀವು ನಿಜವಾದ ಹೀರೊ'ಎಂದು ಟ್ರಂಪ್ ಹೇಳಿದ್ದಾರೆ. ವಿಲಿಯಮ್ಸ್ ಅವರ ಪೋಷಕರಾದ ಶೇನ್ ಮತ್ತು ಶಾನನ್ ಹಾಗೂ ರಕ್ಷಣಾ ಕಾರ್ಯದಲ್ಲಿ ನೆರವಾದ ಮತ್ತೊಬ್ಬ ಲೈಫ್‌ಗಾರ್ಡ್ ಆರನ್ ಬೋನಿನ್ ಕೂಡ ಓವಲ್ ಕಚೇರಿಯಲ್ಲಿ ಉಪಸ್ಥಿತರಿದ್ದರು.

ಸಾಹಸಮಯ ರಕ್ಷಣಾ ಕಾರ್ಯಾಚರಣೆಯ ವಿಡಿಯೊ ಸಾಮಾಜಿಕ ಮಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಬಳಿಕ, ಲೈಫ್‌ಗಾರ್ಡ್ ಮತ್ತು ಅವರ ಕುಟುಂಬವನ್ನು ಶ್ವೇತಭವನಕ್ಕೆ ಕರೆಸಿ ಸನ್ಮಾನಿಸುವುದಾಗಿ ಟ್ರಂಪ್ ಹೇಳಿದ್ದರು.

'ಇದು ಅದ್ಭುತ ವಿಷಯ. ಆ ಬಾಲಕ ನಿಜಕ್ಕೂ ಅದೃಷ್ಟಶಾಲಿ. ದೇವರು ನಿಮ್ಮನ್ನು ಗಮನಿಸುತ್ತಿದ್ದಾನೆ'ಎಂದು ಅಧ್ಯಕ್ಷರು ನಥಾನಿಯಲ್ ಅವರನ್ನು ಕುರಿತು ಹೇಳಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries