HEALTH TIPS

ದೇಶದ ಸಾಮಾನ್ಯ ಜನರಲ್ಲಿಯೂ ಕ್ಷಮೆ ಕೋರಿ; ಮೆಟಾಗೆ ಯುವ ಕಾಂಗ್ರೆಸ್‌ ಆಗ್ರಹ

ನವದೆಹಲಿ: 'ನೀವು ಭಾರತದ ಜನರ ಧ್ವನಿಯನ್ನು ಅಳಿಸಿ ಹಾಕಿದಿರಿ. ಆದರೆ, ಪ್ರಧಾನಿ ಅವರಲ್ಲಿ ಮಾತ್ರವೇ ಕ್ಷಮೆ ಕೇಳುತ್ತೀರಿ' ಎಂದು ಮೆಟಾ ಅಧಿಕಾರಿಗಳ ವಿರುದ್ಧ ಯುವ ಕಾಂಗ್ರೆಸ್‌ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.


ಮೆಟಾದ ಹಿರಿಯ ಅಧಿಕಾರಿಗಳು ಉಳಿದುಕೊಂಡಿರುವ ಇಲ್ಲಿನ ಹೋಟೆಲ್‌ವೊಂದರ ಎದುರು ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದರು.

'ಯಾರ ಖಾತೆಗಳನ್ನು ಬ್ಲಾಕ್‌ ಮಾಡಿದ್ದೀರೋ ಸ್ಥಗಿತಗೊಳಿಸಿದ್ದೀರೋ ಅಥವಾ ಯಾರ ಖಾತೆಗಳನ್ನು ಅಳಿಸಿ ಹಾಕಲು ಸೂಚಿಸಿದ್ದೀರೋ ಆ ಬಳಕೆದಾರರಲ್ಲಿಯೂ ಕ್ಷಮೆ ಕೇಳಿ' ಎಂದು ಕಾರ್ಯಕರ್ತರು ಒತ್ತಾಯಿಸಿದರು.

'ನೀವು ವಿದ್ಯಾರ್ಥಿಗಳ ಧ್ವನಿಯನ್ನೂ ಅವರ ಕಂಟೆಂಟ್‌ಗಳನ್ನೂ ದಮನ ಮಾಡುವ ಕೆಲಸ ಮಾಡಿದ್ದೀರಿ' ಎಂದು ಯುವ ಕಾಂಗ್ರೆಸ್‌ ಕಾರ್ಯಕರ್ತರು ದೂರಿದರು.

'ಕೇಂದ್ರ ಸರ್ಕಾರ ಕ್ರಮ ಕೈಗೊಂಡ ಕೆಲವೇ ಗಂಟೆಗಳಲ್ಲಿ ಮೆಟಾವು ಕ್ಷಮೆ ಕೋರಿತು. ಭಾರತದ ಸಾವಿರಾರು ಸಾಮಾನ್ಯ ಜನರ ಖಾತೆಗಳನ್ನೂ ಇದೇ ರೀತಿ ಅಳಿಸಿ ಹಾಕಲಾಗಿದೆ, ರದ್ದು ಮಾಡಲಾಗಿದೆ. ಇದಕ್ಕೆ ಮೆಟಾದ ಬಳಿ ಯಾವುದೇ ಪಾರದರ್ಶಕತೆ ಇಲ್ಲ; ಹೊಣೆಗಾರಿಕೆಯೂ ಇಲ್ಲ. ಪ್ರಧಾನಿ ಅವರನ್ನು ಗೌರವದಿಂದ ನೋಡಿದಂತೆ, ಭಾರತದ ಜನಸಾಮಾನ್ಯರನ್ನೂ ನೋಡಿ' ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

'ಮೆಟಾವು ಬಿಜೆಪಿ ಐಟಿ ಸೆಲ್‌ ರೀತಿಯಲ್ಲಿ ವರ್ತಿಸುವುದನ್ನು ನಿಲ್ಲಿಸಬೇಕು. ಒಂದೋ ನೀವು ನಿಮ್ಮ ಕೇಂದ್ರ ಕಚೇರಿಯನ್ನು ಬಿಜೆಪಿ ಕಚೇರಿಗೆ ಸ್ಥಳಾಂತರಿಸಿ ಇಲ್ಲವೇ ತುಸು ಧೈರ್ಯ ತೋರಿಸಿ. ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಇದಕ್ಕೆ ಸಂಬಂಧಿಸಿ ಕಂಟೆಂಟ್‌ಗಳನ್ನು ಸರ್ಕಾರದ ಪರವಾಗಿ ಅಳಿಸಿ ಹಾಕುವ ಕೆಲಸ ಮಾಡಬಾರದು' ಎಂದು ಯುವ ಕಾಂಗ್ರೆಸ್‌ ಆಗ್ರಹಿಸಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries