HEALTH TIPS

ಕೊಳವೆ ಬಾವಿಗಳ ಜಲ ಮರುಪೂರಣಕ್ಕೆ ಸಹಾಯಧನ

ಕಾಸರಗೋಡು: ಅಂತರ್ಜಲ ಮರುಪೂರಣ ಮಟ್ಟವನ್ನು ಹೆಚ್ಚಿಸಲು ಕಾಸರಗೋಡು ಜಿಲ್ಲೆಯ ನಿರ್ಣಾಯಕ ಬ್ಲಾಕ್‍ಗಳಾದ ಕಾಸರಗೋಡು ಬ್ಲಾಕ್ ನಲ್ಲಿ ಒಳಗೊಂಡ ಚೆಂಗಳ,  ಮಧೂರು, ಚೆಮ್ನಾಡ್, ಬದಿಯಡ್ಕ, ಕುಂಬಳೆ ಮತ್ತು ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿಗಳು ಹಾಗೂ ಕಾಸರಗೋಡು ನಗರಸಭೆ ವ್ಯಾಪ್ತಿಯ ಖಾಸಗಿ ವ್ಯಕ್ತಿಯ (ಮನೆಗಳು) ಮತ್ತು ಖಾಸಗಿ ಸಂಸ್ಥೆಗಳಲ್ಲಿನ ಕೊಳವೆಬಾವಿಗಳಿಗೆ  ಜಲಮರುಪೂರಣಕ್ಕಾಗಿ ಸಹಾಯಧನ ನೀಡುವ ಯೋಜನೆಯೊಂದನ್ನು ಭೂಗರ್ಭಜಲ ಇಲಾಖೆಯು ಜಾರಿಗೆ ತಂದಿದೆ. 

ಕಾಸರಗೋಡು ಬ್ಲಾಕಿನ ಹಾಗೂ ನಗರಸಭೆಯ ಕಾಯಂ ನಿವಾಸಿಗಳಿಗೆ ಕೊಳವೆಬಾವಿಗಳ ಮರುಪೂರಣಕ್ಕೆ ಶೇ.80 ರಷ್ಟು ಸಹಾಯಧನವನ್ನು ಭೂಗರ್ಭಜಲ ಇಲಾಖೆಯು ನೀಡುತ್ತದೆ. ಇದಕ್ಕಾಗಿ 50 ಲಕ್ಷ ರೂಪಾಯಿ ಮೀಸಲಿಡಲಾಗಿದೆ. ನಿಗದಿತ ನಮೂನೆಯಲ್ಲಿನ ಅರ್ಜಿಯನ್ನು ಸೆಪ್ಟೆಂಬರ್ 30ರ ಒಳಗೆ ಭೂಗರ್ಭಜಲ ಇಲಾಖೆಯ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 04994 255392 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries